Advertisement

Kaadaadi Movie: ಹೆಸರು ಬದಲಿಸಿಕೊಂಡ ಶಶಿಕುಮಾರ್‌ ಪುತ್ರ ಅಕ್ಷಿತ್‌

12:56 PM May 31, 2024 | Team Udayavani |

ನಾಯಕ-ನಾಯಕಿಯರು ತಮ್ಮ ಮೂಲ ಹೆಸರು ಬದಲಿಸಿಕೊಂಡು ಆಗಾಗ ಅದೃಷ್ಟ ಪರೀಕ್ಷೆಗಿಳಿಯುತ್ತಾರೆ. ಈಗ ನಟ ಶಶಿಕುಮಾರ್‌ ಪುತ್ರ ಕೂಡಾ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಅಕ್ಷಿತ್‌ ಎಂಬ ಹೆಸರನ್ನು ಆದಿತ್ಯ ಎಂದು ಬದಲಿಸಿಕೊಂಡಿದ್ದಾರೆ. ಈ ಹೆಸರಿನೊಂದಿಗೆ ಈಗ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಅದು “ಕಾದಾಡಿ’ ಮೂಲಕ. ಇದು ಅದಿತ್ಯ ನಟನೆಯ ಹೊಸ ಸಿನಿಮಾ.

Advertisement

ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಸತೀಶ್‌ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಂಸ್‌ ಮುಖಾಂತರ ನಿರ್ಮಾಣ ಮಾಡಿದ್ದಾರೆ.

ನಾಯಕನ ಪರಿಚಯದ ಎರಡನೇ ಲಿರಿಕಲ್‌ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ ತಂಡ. ಎನ್‌.ಮಾರುತಿ ಸಾಹಿತ್ಯದ “ಕಲೆಯು ಇರಬೇಕು, ಮನೆಯು ಇರಬೇಕು, ಗುಡಿಯು ಇರಬೇಕು, ಕುಲವೂ ಇರಬೇಕು. ಸಹನೆಯು ಇರಬೇಕು, ಸಾಧನೆಯು ಇರಬೇಕು, ಗೆಲುವು ಇರಬೇಕು, ಸೋತರೂ ಗೆಲ್ಲುವ ಛಲವು ಇರಬೇಕು’ ಹಾಡಿಗೆ ಶಶಾಂಕ್‌ ಶೇಷಗಿರಿ ಧ್ವನಿಯಾಗಿದ್ದಾರೆ.

ಜೀವನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾ ಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳು ನೋಡಿ ಕಲಿಯುವಂತಾ ಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೇವೆ. ಇಂತಹ ಅಂಶಗಳನ್ನು ಥ್ರಿಲ್ಲರ್‌ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ.

ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್‌ ನಾಯಕಿ ಯರು. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಶ್ರವಣ್‌ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಡಿ.ಯೋಗಿ ಪ್ರಸಾದ್‌ ಛಾಯಾಗ್ರಹಣವಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್‌, ಚೆನ್ನೈ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next