Advertisement

ಮಹಾರಾಷ್ಟ್ರ ಸಿಎಂ ‘ಬೆಳಗಾವಿ’ ಹೇಳಿಕೆ: ರಾಜ್ಯದ ನಾಯಕರ ಖಂಡನೆ, ಸಚಿವೆ ಜೊಲ್ಲೆ ಎಚ್ಚರಿಕೆ

11:40 AM Jan 28, 2021 | Team Udayavani |

ಬೆಂಗಳೂರು: ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ರಾಜ್ಯದಲ್ಲಿ ಪಕ್ಷಾತೀತ ವಿರೋಧ ವ್ಯಕ್ತವಾಗಿದೆ. ರಾಜ್ಯ ಸಚಿವರುಗಳು, ವಿರೋಧ ಪಕ್ಷದವರೂ ಠಾಕ್ರೆ ಹೇಳಿಕೆಯನ್ನು ವಿರೋಧಿಸಿದ್ದು, ಮುಂಬೈಯನ್ನೂ ಕರ್ನಾಟಕಕ್ಕೆ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಾರಾಷ್ಟ್ರ ಸಿಎಂ ಬಾಲ ಬಿಚ್ಚಿದರೆ ನಾವು ಕೈಕಟ್ಟಿ ಕೂರುವುದಿಲ್ಲ‌. ಅವರು ಹಾಗೆ ಕೇಳಿದರೆ ನಾವೂ ಸೊಲ್ಲಾಪುರ, ಮುಂಬೈಯನ್ನು ಕೇಳಬೇಕಾಗುತ್ತದೆ. ನಾವು ವಿವಿಧತೆಯಲ್ಲಿ ಏಕತೆ ಕಂಡವರು. ಮಹಾರಾಷ್ಟ್ರ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡುವುದು ತಪ್ಪು ಎಂದಿದ್ದಾರೆ.

ಇದನ್ನೂ ಓದಿ:ಮತ್ತೆ ಉದ್ಧವ್‌ ಉದ್ಧಟತನ

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಮ್ಮ ಕ್ಷೇತ್ರ ಇರುವುದು ಮುಂಬೈ ಕರ್ನಾಟಕದಲ್ಲಿ. ನನ್ನ‌ಕ್ಷೇತ್ರದ ಮೊದಲ ಶಾಸಕ ಮುಂಬೈ ವಿಧಾನಸಭೆಗೆ ಹೋಗಿದ್ದರು. ಮುಂಬೈನಲ್ಲಿ ನಮ್ಮ ಆಸ್ತಿ ಇದೆ. ನಾವು ಮುಂಬೈನ್ನು ಕರ್ನಾಟಕದ ಭಾಗ ಎಂದು ತೀರ್ಮಾನಿಸಿದ್ದೇವೆ. ಹಾಗಾಗಿ ಕರ್ನಾಟಕಕ್ಕೆ ಸೇರಿಸಿ ಎಂದರು.

ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ, ಮಹಾರಾಷ್ಟ್ರದ ಸಿಎಂ ಜನರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಗಡಿ ವಿಚಾರ ಎತ್ತಿ, ಅದರ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಕರ್ನಾಟಕದ ಭೂಮಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳುತ್ತಿದ್ದಾರೆ. ನಾವು ಮಹಾರಾಷ್ಟ್ರ ಭೂಮಿ ನಮಗೆ ಸೇರಬೇಕು ಅಂತ ಹೇಳಬೇಕೇ? ಇದು ಉದ್ಧಟತನದ ಹೇಳಿಕೆಯಾಗಿದೆ. ಮಹಾಜನ್ ವರದಿಯೇ ಅಂತಿಮ ಎಂದರು.

Advertisement

ಇದನ್ನೂ ಓದಿ: ಮುಂಬೈಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು: ಡಿಸಿಎಂ ಲಕ್ಷ್ಮಣ ಸವದಿ

ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ಮಾತನಾಡಿ, ನಾನು ಕನ್ನಡಿಗನಾಗಿ ಹೇಳುತ್ತೇನೆ. ಯಾವುದೇ ಕಾರಣಕ್ಕೂ ಬೆಳಗಾವಿ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ವಿವಾದ ಸೃಷ್ಟಿ ಮಾಡಲು ಪದೇ ಪದೇ ಇಂತಹ ಹೇಳಿಕೆ ಕೊಡುತ್ತಾರೆ. ಇದು ಒಕ್ಕೂಟ ವ್ಯವಸ್ಥೆಯ ವಿರೋಧದ ಹೇಳಿಕೆ. ಇಂತಹ ಹೇಳಿಕೆಗಳಿಗೆ ಮನ್ನಣೆ ಸಿಗುವುದಿಲ್ಲ ಎಂದರು.

ಬುಧವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಪ್ರದೇಶಗಳು ನಮ್ಮವು. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇತ್ಯರ್ಥವಾಗುವ ವರೆಗೆ ಬೆಳಗಾವಿ ಸೇರಿದಂತೆ ಮರಾಠಿ ಭಾಷಿಕರು ಹೆಚ್ಚಾಗಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next