ದೂರದಲ್ಲಿರುವ ಹೊಸೂರು ಶಾಸಕರ ಮನೆಗೆ ಶಶಿಕಲಾ ಭೇಟಿ ನೀಡಿದ್ದಾರೆ ಎಂದು ಮತ್ತೂಂದು ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೇ ಆ.19ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿರುವ 10 ಪುಟಗಳ ವರದಿಯಲ್ಲಿ ಡಿಐಜಿ ರೂಪಾ ಈ ಬಗ್ಗೆ ಉಲ್ಲೇಖೀಸಿದ್ದಾರೆ. ಮೂಲಗಳ ಪ್ರಕಾರ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಿಂದ ಹೊಸೂರು
ಶಾಸಕರ ಮನೆಗೆ ಹೋಗಿದ್ದರು. ಅಲ್ಲಿ ರಾಜಾತಿಥ್ಯ ಪಡೆದು ಮತ್ತೆ ಜೈಲಿಗೆ ಮರಳಿದ್ದಾರೆ. ಈ ದೃಶ್ಯಗಳು ಜೈಲಿನ
1 ಮತ್ತು 2ನೇ ಗೇಟ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
Advertisement
ಈ ಕುರಿತು 4 ವಿಡಿಯೋ ತುಣುಕುಗಳನ್ನು ಸಲ್ಲಿಸಿದ್ದು, ಒಂದು ವಿಡಿಯೋದಲ್ಲಿ ಶಶಿಕಲಾ ಕಾಟನ್ ನೈಟಿ ಧರಿಸಿದ್ದಾರೆ. ಮತ್ತೂಂದು ವಿಡಿಯೋದಲ್ಲಿ ಮಣ್ಣಿನ ಬಣ್ಣದ ಚೂಡಿದಾರ್ ಧರಿಸಿದ್ದು, ಇಳವರಸಿ ಕಿತ್ತಲೆ ಬಣ್ಣದ ಸೀರೆ ಧರಿಸಿದ್ದಾರೆ.ಹೊರಗಡೆಯಿಂದ ಜೈಲಿಗೆ ಪ್ರವೇಶಿ ಸುತ್ತಿರುವ ದೃಶ್ಯದಲ್ಲಿ ಶಶಿಕಲಾ ಕೈಯಲ್ಲಿ ಬ್ಯಾಗ್ ಇದ್ದು, ಇದು ಶಾಪಿಂಗ್ ಬ್ಯಾಗ್ ಮಾದರಿಯಿದೆ.
ವಾರ್ಡ್‌ನ್‌ಗಳಿದ್ದಾರೆ. ಜತೆಗೆ ಸಜಾ ಕೈದಿಯೊಬ್ಬನಿದ್ದಾನೆ. ಈ ಕುರಿತು ತನಿಖೆ ನಡೆಸಿದಾಗ ಇಬ್ಬರು ಶಾಪಿಂಗ್
ಮಾಡಲು ಹೊರ ಹೋಗಿದ್ದಾರೆಂದು ತಿಳಿದು ಬಂದಿದೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ.