Advertisement

ಜೈಲಿನಿಂದ ಹೊರಬಂದ ಶಶಿಕಲಾ ? ಸಿಸಿಟಿವಿಯಲ್ಲಿ ಸೆರೆ

11:09 AM Aug 21, 2017 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಹಾಗೂ ಇಳವರಸಿ ಅವರಿಗೆ ಜೈಲಿನಿಂದ ಹೊರಹೊಗಲು ಅವಕಾಶ ನೀಡಲಾಗಿದೆಯೇ ಎಂಬ ಅಘಾತಕಾರಿ ಅಂಶಕ್ಕೆ ಪುಷ್ಟಿ ನೀಡುವಂತ ಸಾಕ್ಷಿ ಸಿಕ್ಕಿದೆ. ಶಶಿಕಲಾ ನಟರಾಜನ್‌ ಹಾಗೂ ಇಳವರಸಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಒಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Advertisement

ಡಿಐಜಿ ರೂಪಾ ಅವರು ಎಸಿಬಿ ಪೊಲೀಸರಿಗೆ ಹಸ್ತಾಂತರಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಶಿಕಲಾ ಮತ್ತು ಇಳವರಸಿ ಬ್ಯಾಗ್‌ ಹಿಡಿದು ಜೈಲಿನ ಒಳಗೆ ಪ್ರವೇಶಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇದು ಜೈಲು ಅಧಿಕಾರಿಗಳು ಇವರಿಬ್ಬರನ್ನು ಜೈಲಿನಿಂದ ಹೊರ ಹೋಗಲು ಅವಕಾಶ ನೀಡಿದ್ದಾರೆಯೇ ಎಂದು ಅನುಮಾನ ಮೂಡುವಂತಿದೆ.

ಜುಲೈ 31ರಂದು ಎಸಿಬಿ ಡಿಐಜಿ ರೂಪಾ ಅವರಿಗೆ  ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿತ್ತು. ರೂಪಾ ಅವರು ವಿಚಾರಣೆ ವೇಳೆ ತಮ್ಮ ಬಳಿ ಇದ್ದ ದಾಖಲೆಹಾಗೂ ಸಿಸಿಟಿವಿ ದೃಶ್ಯವಾಳಿಗಳನ್ನು ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next