Advertisement

ಶಶಿ ತರೂರ್‌ “ಚಿಲ್ಲರ್‌’ಟ್ವೀಟ್‌ಗೆ ಭಾರೀ ಆಕ್ರೋಶ

09:29 AM Nov 20, 2017 | Team Udayavani |

ಹೊಸದಿಲ್ಲಿ: ಭಾರತದ ಯುವತಿ ಮಾನುಷಿ ಚಿಲ್ಲರ್‌ ವಿಶ್ವಸುಂದರಿಯಾಗಿ ಆಯ್ಕೆಯಾದ ಕೂಡಲೇ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಮಾಡಿದ ಟ್ವೀಟ್‌ವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.

Advertisement

 ಚಿಲ್ಲರ್‌ ಬಗ್ಗೆ ತರೂರ್‌ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗವೂ ತರೂರ್‌ಗೆ ಸಮನ್ಸ್‌ ಜಾರಿ ಮಾಡಿದೆ. ಶನಿವಾರ ತರೂರ್‌ ಅವರು, “ನಮ್ಮ ನೋಟು ಅಪಮೌಲ್ಯದಿಂದಾಗಿ ಎಂಥ ದೊಡ್ಡ ತಪ್ಪಾಗಿದೆ ನೋಡಿ! ಭಾರತದ ನಗದು ಇಡೀ ಜಗತ್ತಲ್ಲೇ ಪಾರಮ್ಯ ಸಾಧಿಸಿದೆ ಎನ್ನುವುದನ್ನು ಬಿಜೆಪಿ ಮನ ವರಿಕೆ ಮಾಡಿಕೊಳ್ಳಬೇಕಿತ್ತು: ಈಗ ನೋಡಿ, ನಮ್ಮ “ಚಿಲ್ಲರ್‌’ ಮಿಸ್‌ ವರ್ಲ್ಡ್ ಆಗಿದೆ’ ಎಂದು ಟ್ವೀಟಿಸಿದ್ದರು. ಅದು ವಿವಾದವಾಗುತ್ತಿದ್ದಂತೆ ತರೂರ್‌ ಕ್ಷಮೆ ಯಾಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next