Advertisement

Glod Smuggle: ಚಿನ್ನ ಕಳ್ಳಸಾಗಣೆ- ಕಾಂಗ್ರೆಸ್‌ ಮುಖಂಡ ತರೂರ್‌ ಮಾಜಿ ಆಪ್ತ ಸಹಾಯಕನ ಬಂಧನ

03:02 PM May 30, 2024 | Team Udayavani |

ನವದೆಹಲಿ: ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಕಾಂಗ್ರೆಸ್‌ ಮುಖಂಡ, ಮಾಜಿ ಸಂಸದ ಶಶಿ ತರೂರ್‌ ಅವರ ಮಾಜಿ ಆಪ್ತ ಸಹಾಯಕನನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ಗುರುವಾರ (ಮೇ 30) ನಡೆದಿದೆ.

Advertisement

ಇದನ್ನೂ ಓದಿ:Pen Drive ಹಂಚಿಕೆ ಪ್ರಕರಣ: ಆರೋಪಿಗಳಿಗೆ ಜಾಮೀನು ಮಂಜೂರು, ಹಾಸನದಲ್ಲಿ ಬೃಹತ್ ಪ್ರತಿಭಟನೆ

ತರೂರ್‌ ಅವರ ಮಾಜಿ ಸಿಬಂದಿಯನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿರುವ ವೇಳೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಿಬಂದಿ ಶಿವ ಪ್ರಸಾದ್‌ ಎಂಬಾತನ ಬಳಿ 500 ಗ್ರಾಂ ಚಿನ್ನ ಇದ್ದಿರುವುದು ತಪಾಸಣೆ ವೇಳೆ ಪತ್ತೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಪ್ಯಾಕೇಟ್‌ ವೊಂದನ್ನು ಕೊಂಡೊಯ್ಯುತ್ತಿದ್ದಾಗ ಅಧಿಕಾರಿಗಳು ಪ್ರಶ್ನಿಸಿದಾಗ ಸಮರ್ಪಕವಾದ ಉತ್ತರ ನೀಡಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಾಕ್‌ ನಿಂದ ಇಲ್ಲಿಗೆ ಆಗಮಿಸಿದ್ದ ವ್ಯಕ್ತಿ ಹಾಗೂ ತರೂರ್‌ ಆಪ್ತ ಸಹಾಯಕನನ್ನು ಬಂಧಿಸಿದ್ದು, ಇಬ್ಬರ ವಿರುದ್ಧ ಚಿನ್ನಕಳ್ಳಸಾಗಣೆ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Advertisement

ವಿಷಯ ತಿಳಿದು ಆಘಾತವಾಯಿತು: ತರೂರ್‌

ನಾನು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ವಿಷಯ ತಿಳಿದು ಆಘಾತವಾಯಿತು ಎಂದು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸಾದ್‌ ನಿವೃತ್ತಿಯಾಗಿದ್ದು, 72 ವರ್ಷವಾಗಿದ್ದು, ಆಗಾಗ ಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದುದರಿಂದ ಸಹಾನೂಭೂತಿಯಿಂದ ಅವರನ್ನು ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿ ಉಳಿಸಿಕೊಳ್ಳಲಾಗಿತ್ತು. ನಾನು ಯಾವುದೇ ತಪ್ಪನ್ನು ಕ್ಷಮಿಸುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತರೂರ್‌ ತಿಳಿಸಿದ್ದಾರೆ.

ಚಿನ್ನ ಕಳ್ಳ ಸಾಗಾಣಿಕೆದಾರರ ಮೈತ್ರಿ: ರಾಜೀವ್‌ ಚಂದ್ರಶೇಖರ್‌

ಕಾಂಗ್ರೆಸ್‌ ಮತ್ತು ಸಿಪಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಜೀವ್‌ ಚಂದ್ರಶೇಖರ್‌, ಇವರದ್ದು ಚಿನ್ನ ಕಳ್ಳಸಾಗಾಣಿಕೆದಾರರ ಮೈತ್ರಿಯಾಗಿದೆ ಎಂದು ಆರೋಪಿಸಿದರು. ಮೊದಲ ಬಾರಿಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಶಾಮೀಲಾಗಿದ್ದು, ಇದೀಗ ಕಾಂಗ್ರೆಸ್‌ ಸಂಸದರ ಆಪ್ತ ಸಹಾಯಕನನ್ನು ಚಿನ್ನಕಳ್ಳಸಾಗಣೆ ಆರೋಪದಲ್ಲಿ ಬಂಧಿಸಲಾಗಿದೆ. ಇವರದ್ದು ಚಿನ್ನ ಕಳ್ಳಸಾಗಾಣಿಕೆದಾರರ ಮೈತ್ರಿಯಾಗಿದೆ ಎಂದು ಎಕ್ಸ್‌ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next