Advertisement

ಮಾನಸಿಕ ಸಂತುಲನೆ ಇಲ್ಲದ ಶಶಿ ತರೂರ್‌ ಪಾಕಿಗೆ ಹೋಗಬೇಕು: ಸ್ವಾಮಿ

07:11 PM Jul 12, 2018 | udayavani editorial |

ಹೊಸದಿಲ್ಲಿ : ‘2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು ಬಂದರೆ ಭಾರತವು ಹಿಂದೂ ಪಾಕಿಸ್ಥಾನವಾಗಿ ಪರಿವರ್ತಿತವಾಗುತ್ತದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ‘ಶಶಿ ತರೂರ್‌ ತಮ್ಮ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದಾರೆ; ಅವರನ್ನು ಪಾಕಿಸ್ಥಾನಕ್ಕೆ ಕಳುಹಿಸಬೇಕು; ಹಿಂದುಗಳು ಸರ್ವಾಧಿಕಾರಿಗಳಾಗಲಾರರು’ ಎಂದು ಹೇಳಿದ್ದಾರೆ.

Advertisement

ಮುಂದಿನ ಮಹಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ದೇಶದ ಸಂವಿಧಾನವನ್ನು ಹರಿದು ಹಾಕಿ ತನ್ನದೇ ಆದ ನೀತಿ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಶಶಿ ತರೂರ್‌ ಹೇಳಿದ್ದರು. 

ಸ್ವಾಮಿ ಅವರು ತಮ್ಮ ಪ್ರತಿಕ್ರಿಯೆಯಲ್ಲಿ “ಮುಸ್ಲಿಂ ಸಮುದಾಯವಂತೂ ಈಗ ಕಾಂಗ್ರೆಸ್‌ ಜತೆಗಿಲ್ಲ; ರಾಹುಲ್‌ ಗಾಂಧಿ ಅವರು ಹಿಂದೂ ಪಾಕಿಸ್ಥಾನ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next