Advertisement
ಇತ್ತೀಚಿನ ವರ್ಷಗಳಲ್ಲಿ, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, 2014ರಲ್ಲಿ ಹೃದಯ ಸೋಂಕಿಗೆ ಒಳಗಾಗಿದ್ದರು. ಇದು ಉಲ್ಬಣಗೊಂಡಿದ್ದರಿಂದ ಇತ್ತೀಚೆಗೆ ಅವರು ಬೈಪಾಸ್ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. 166 ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅವರು, ಕೆಲವು ಇಂಗ್ಲಿಷ್ ಚಿತ್ರಗಳಲ್ಲೂ ಅಭಿನಯಿಸಿದ್ದರು.
ಹಿಂದಿ ಚಿತ್ರರಂಗದ ಮೇರು ಪರ್ವತಗಳಲ್ಲೊಂದಾದ ಪೃಥ್ವಿರಾಜ್ ಕಪೂರ್ (ಕನ್ನಡದ “ಸಾûಾತ್ಕಾರ’ ಚಿತ್ರದಲ್ಲಿ ಡಾ.ರಾಜ್ ಅವರ ತಂದೆಯ ಪಾತ್ರ ಮಾಡಿದ್ದರು)ಗರಡಿಯಲ್ಲಿ ಪಳಗಿದ ಅವರ ಮೊದಲಿಬ್ಬರು ಮಕ್ಕಳಾದ ರಾಜ್ ಕಪೂರ್ ಹಾಗೂ ಶಮಿ ಕಪೂರ್ ಅಕ್ಷರಶಃ ಬಾಲಿವುಡ್ ಚಿತ್ರರಂಗವನ್ನು ಆಳಿದವರು. ಅವರ ನೆರಳಿನಲ್ಲೇ ಬಂದ ಶಶಿಕಪೂರ್, ಪೃಥ್ವಿರಾಜ್ ಅವರ ಮೂರನೇ ಹಾಗೂ ಕಿರಿಯ ಪುತ್ರ. ಅಷ್ಟೇ ಅಲ್ಲ, 1960, 70ರ ದಶಕದಲ್ಲಿ ಆಗಿನ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಶಶಿಕಪೂರ್, ಹಿಂದಿಯ ಮೊದಲ ಚಾಕ್ಲೇಟ್ ಹೀರೋ ಇಮೇಜ್ ಪಡೆದವರು.
Related Articles
Advertisement
ಚಿತ್ರಗಳಲ್ಲಿ ನಾಯಕರಾಗಿ ಮಿಂಚುವುದಕ್ಕೂ ಮೊದಲು ಅವರು ಸಹಾಯಕ ನಿರ್ದೇಶಕರಾಗಿ ತಮ್ಮ ಸಂಸ್ಥೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಅವುಗಳಲ್ಲಿ ಪೋಸ್ಟ್ ಬಾಕ್ಸ್ 999, ಗೆಸ್ಟ್ ಹೌಸ್ ಪ್ರಮುಖವಾದವು. ಆನಂತರ, ಧರ್ಮಪುತ್ರ (1961) ಚಿತ್ರದ ಮೂಲಕ ಅವರು ನಾಯಕರಾಗಿ ಕಾಣಿಸಿಕೊಳ್ಳಲಾರಂಭಿಸಿದರು. 116 ಚಿತ್ರಗಳ ಅವರ ಸಿನಿಜೀವನದಲ್ಲಿ “ನಮಕ್ ಹಲಾಲ್’, “ಸತ್ಯಂ ಶಿವಂ ಸುಂದರಂ’, “ದೀವಾರ್’ ಹಾಗೂ “ವಖ್¤’ ಚಿತ್ರಗಳು ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ ಚಿತ್ರಗಳು.
1958ರಲ್ಲಿ ಇಂಗ್ಲೆಂಡ್ ಮೂಲದ ಜೆನ್ನಿಫರ್ ಕೆಂದಾಲ್ ಅವರನ್ನು ವಿವಾಹವಾಗಿದ್ದ ಶಶಿಕಪೂರ್, ಕುನಾಲ್ ಕಪೂರ್, ಕರಣ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳನ್ನು ಅಗಲಿದ್ದಾರೆ. ಜೆನ್ನಿಫರ್ 1984ರಲ್ಲೇ ನಿಧನರಾಗಿದ್ದರು.