Advertisement

ಶಿವಮೊಗ್ಗ: ಪೊಲೀಸರ ಮುಂದೆ ಮಚ್ಚು ಪ್ರದರ್ಶನ; ಲಾಂಗ್, ಮಚ್ಚು ಹಿಡಿದ ವೀಡಿಯೋಗಳು ವೈರಲ್!

04:19 PM Feb 23, 2022 | Team Udayavani |

ಶಿವಮೊಗ್ಗ: ಇಲ್ಲಿನ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಕಾರಣದಿಂದ ಶಿವಮೊಗ್ಗ ಜಿಲ್ಲೆಉದ್ವಿಗ್ನ ಸ್ಥಿತಿಯಲ್ಲಿದೆ. ಇದರ ನಡುವೆ ಲಾಂಗು, ಮಚ್ಚು ಹಿಡಿದಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ಅಲ್ಲದೆ ಪೊಲೀಸರ ಮುಂದೆಯೇ ಮಚ್ಚು ಪ್ರದರ್ಶನ ಮಾಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ‘ಇಸ್ಲಾಂ ಪವರ್’ ಎಂಬ ಘೋಷ ವಾಕ್ಯವಿರುವ ವೀಡಿಯೋವನ್ನು ಹರಿಬಿಡಲಾಗುತ್ತಿದೆ.

ಮತ್ತೊಂದೆಡೆ ಹರ್ಷ ಅಂತ್ಯಸಂಸ್ಕಾರದ ವೇಳೆಯೂ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಸಂಸ್ಕಾರ ನಡೆಯುತ್ತಿತ್ತು. ಈ ವೇಳೆ ಚಿತಾಗಾರ ಮತ್ತು ಪಕ್ಕದ ರಾಜೀವ್ ಗಾಂಧಿ ಬಡಾವಣೆಯಿಂದ ಕಲ್ಲು ತೂರಾಟವಾಗಿತ್ತು. ಕಲ್ಲು ತೂರಾಟದ ವೇಳೆ ರಾಜೀವ್ ಗಾಂಧಿ ಬಡಾವಣೆಯಲ್ಲಿ ಲಾಂಗ್ ಮಚ್ಚುಗಳನ್ನು ಝಳಪಿಸಲಾಗಿದೆ.

ಇದನ್ನೂ ಓದಿ:ಹರ್ಷನ ಕೊಲೆಗೆ ಹುಡುಗಿಯರನ್ನು ಬಳಸಿಕೊಂಡರೇ ಆರೋಪಿಗಳು; ಸ್ನೇಹಿತ ಹೇಳಿದ್ದೇನು?

ಉದ್ವಿಗ್ನ ಪರಿಸ್ಥಿತಿಯ ನಡುವೆ ಮಾರಕಾಸ್ತ್ರಗಳನ್ನು ವೈಭವೀಕರಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next