ಶಾರ್ಜಾ: ಶಾರ್ಜಾದಲ್ಲಿನ ಬೃಹತ್ ಕಟ್ಟಡಗಳ ಮಾಲಕರಿಗೆ ತಮ್ಮ ಕಟ್ಟಡದ ಸುರಕ್ಷೆಗಾಗಿ ಎಚ್ಚರ ವಹಿಸುವಂತೆ ಅವರು ದುಬೈ ಆಡಳಿತ ಸೂಚನೆ ನೀಡಿದೆ.
ಅಪಾಯ ತಡೆಗಟ್ಟುವಿಕೆ ಮತ್ತು ಸುರಕ್ಷತಾ ಪ್ರಾಧಿಕಾರವು ಈ ವರ್ಷ ಪರಿಶೀಲಿಸಿದ ಸೌಲಭ್ಯಗಳ ಪೈಕಿ ಶೇ. 80ರಷ್ಟು ಕಟ್ಟಡಗಳಲ್ಲಿ ಯಾವುದೇ ಹೆಚ್ಚಿನ ಭದ್ರತಾ ಸೌಲಭ್ಯಗಳು ಇಲ್ಲ. ಈ ಕಾರಣಕ್ಕಾಗಿ ಸಾರ್ವಜನಿಕವಾಗಿರುವ ತಮ್ಮ ಕಟ್ಟಡಗಳ ಸುರಕ್ಷತೆಗಾಗಿ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.
ಕಟ್ಟಡಗಳು ಬೆಂಕಿಗೆ ಸಿಲುಕಿದ ಸಂದರ್ಭದಲ್ಲಿ ನಿವಾಸಿಗಳನ್ನು ತ್ವರಿತವಾಗಿ ಸ್ಥಳಾಂತರಿಸಬೇಕಾದ ತುರ್ತು ಸೇವೆಗಳು ಬಹಳಷ್ಟು ಕಟ್ಟಡಗಳಲ್ಲಿ ಇಲ್ಲವಾಗಿದೆ. ಅಗ್ನಿಯನ್ನು ನಿಯಂತ್ರಿಸುವ ಸೌಕರ್ಯಗಳು ಎಲ್ಲಾ ಕಟ್ಟಡಗಳಲ್ಲಿ ಇರಲೇ ಬೇಕಾಗಿದ್ದು, ಇದರ ಉಲ್ಲಂಘನೆಯಾಗುತ್ತದೆ. ಇನ್ನು ಮುಂದೆ ಇಂತಹ ಉಲ್ಲಂಘನೆಗಳು ಸ್ಪಷ್ಟವಾದ ಮಾರ್ಗಸೂಚಿ ನೀಡಿದ ಬಳಿಕವೂ ಕಟ್ಟಡ ಮಾಲಕರು ಅಳವಡಿಸಿ ಕೊಳ್ಳದೇ ಇದ್ದರೆ ದಂಡವನ್ನು ವಿಧಿಸಲಾಗಬೇಕಾಗುತ್ತದೆ ಎಂದು ಅಲ್ಲಿನ ಸರಕಾರ ಎಚ್ಚರಿಸಿದೆ. ಒಂದು ವೇಳೆ ದಂಡಕ್ಕೂ ಹೆದದೇ ಇದ್ದರೆ ಕಾನೂನು ರೀತಿಯ ಹೋರಾಟದ ಎಚ್ಚರಿಕೆಯನ್ನು ನೀಡಲಾಗಿದೆ.
ಅಪಾಯದ ಸಂದರ್ಭಗಳನ್ನು ಎದುರಿಸಲು ತುರ್ತು ನಿರ್ಗಮನಗಳು, ಎಲಿವೇಟರ್‌ಗಳು ಸದಾ ಕಾಲ ಬಳಕೆಗೆ ಯೋಗ್ಯವಾಗಿರಬೇಕು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಈ ನಗರದಲ್ಲಿ ಅವರ ಸುರಕ್ಷೆಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಲಾಗುತ್ತದೆ. ಇಲ್ಲಿನ ಶಾಪಿಂಗ್ ಮಾಲ್‌ಗಳಲ್ಲಿ, ಪ್ಲಾಟ್‌ಗಳು ಸೇರಿದಂತೆ ವಸತಿ ಸಮುಚ್ಚಯದಲ್ಲಿ, ಸ್ವಂತ ಮನೆಗಳಲ್ಲಿ ಬೆಂಕಿ ಅವಗಡಗಳನ್ನು ತಪ್ಪಿಸುವಂತಹ ಪೂರ್ವಭಾವಿ ಉಪಕರಣಗಳ ಕೊರತೆ ಇದೆ.
ಇನ್ನು ತುರ್ತು ಸಂದರ್ಭ ಮನೆಯಿಂದ ಹೊರ ಹೋಗಲು ಇರುವ ಬಾಗಿಲುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿಲ್ಲ. ಇನ್ನು ಕೆಲವು ಕಟ್ಟಡಗಳ ಸಾಮರ್ಥ್ಯವನ್ನು ಮೀರಿ ಜನಗಳನ್ನು ತುಂಬುತ್ತಿದ್ದಾರೆ.ಅವಘಡಗಳ ಸಂದರ್ಭ ಕಟ್ಟಡವನ್ನು ತ್ವರಿತವಾಗಿ ಸ್ಥಳಾಂತರಿಸಬೇಕಾದರೆ ನಿರ್ಗಮನಗಳು ಸ್ಪಷ್ಟವಾಗಿರಬೇಕು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ.