Advertisement

Madurai Bench: ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ: ಮದ್ರಾಸ್‌ ಹೈಕೋರ್ಟ್‌

09:58 PM Oct 29, 2024 | Team Udayavani |

ಮಧುರೈ: ತ್ರಿವಳಿ ತಲಾಖ್‌ ಪ್ರಕರಣವೊಂದರ ವಿಚಾರಣೆಯ ವೇಳೆ ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ. ಅದೊಂದು ಖಾಸಗಿ ಸಂಸ್ಥೆಯಷ್ಟೇ ಎಂದು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ಹೇಳಿದೆ.

Advertisement

ಮುಸ್ಲಿಂ ವೈದ್ಯ ದಂಪತಿಗೆ ಷರಿಯತ್‌ ಕೌನ್ಸಿಲ್‌ 2017ರಲ್ಲಿ ವಿಚ್ಛೇದನ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ತೀರ್ಪು ಕೊಡುವ ಅಧಿಕಾರವಿರುವುದು ಕೋರ್ಟ್‌ಗಳಿಗೆ ಮಾತ್ರ. ಷರಿಯತ್‌ ಕೌನ್ಸಿಲ್‌ ಒಂದು ಖಾಸಗಿ ಸಂಸ್ಥೆಯಷ್ಟೇ. ಅದು ಕೋರ್ಟ್‌ ಅಲ್ಲ. ಪತಿಯು ಕೋರ್ಟ್‌ನಿಂದ ಆದೇಶ ಪಡೆದುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಪತ್ನಿಯು ಒಪ್ಪಿಗೆ ನೀಡಿರದಿದ್ದರೆ, ವಿವಾಹವು ಮಾನ್ಯವಾಗಿ ವಿಸರ್ಜಿಸಲ್ಪಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next