Advertisement

ತ್ರಿವಳಿ ತಲಾಖ್‌ಗೆ ಶರಿಯಾ ವಿರೋಧ: ಜಿಲಾನಿ

03:25 PM Jul 17, 2017 | Team Udayavani |

ಕಲಬುರಗಿ: ತ್ರಿವಳಿ ತಲಾಖ್‌ ಹೇಳುವುದನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಶರಿಯಾ) ವಿರೋಧಿಸುತ್ತದೆ. ಮಂಡಳಿಯಲ್ಲಿ
ಇದಕ್ಕೆ ಅವಕಾಶವಿಲ್ಲ ಎಂದು ಮಂಡಳಿ ಕಾರ್ಯದರ್ಶಿಯಾಗಿರುವ ನ್ಯಾಯವಾದಿ ಜಫರ್‌ ಯಾಬ್‌ ಜಿಲಾನಿ ಹೇಳಿದರು.

Advertisement

ನಗರದ ಫರಹಾನ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಮಿಯತ್‌ ಉಲ್‌ ಉಲ್ಮಾ ಹಮ್ಮಿಕೊಂಡಿದ್ದ ಶರಿಯಾ ವಿವರಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್‌ನ್ನು ಮಂಡಳಿ ಒಪ್ಪದು. ಈ ಬಗ್ಗೆ ಸುಪೀಕೋರ್ಟ್‌ನಲ್ಲಿ ಮಂಡಳಿ ತನ್ನ ವಾದವನ್ನು ಸಮರ್ಪಕವಾಗಿ ಮಂಡಿಸುತ್ತಿದೆ ಎಂದರು.

ಏಕಕಾಲದಲ್ಲಿ ತ್ರಿವಳಿ ತಲಾಖ್‌ ಪದ್ಧತಿ ಅನುಸರಿಸುವವರಿಗೆ ತಕ್ಕ ಪಾಠ ಕಲಿಸಲು ಅವಕಾಶವಿದೆ. ಈ ಅನಿಷ್ಠ ಪದ್ಧತಿ ಬಳಸುವವರಿಗೆ
ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಮುಸ್ಲಿಂ ಸಮುದಾಯವು ತಕ್ಕ ಪಾಠ ಕಲಿಸಬಹುದು ಎಂದರು. ನಿಶ್ಚಿತಾರ್ಥ ಸಂದರ್ಭದಲ್ಲಿ ವಧು ಮತ್ತು ವರರಿಗೆ ತ್ರಿವಳಿ ತಲಾಖ್‌ ಹೇಳುವುದು ಶರಿಯಾ ವಿರುದ್ಧವಾಗಿದೆ ಎಂಬುದನ್ನು ವಿವಾಹ ಪತ್ರದಲ್ಲಿ ನಮೂದಿಸುವ ಮೂಲಕ ಜನಜಾಗೃತಿ ಮೂಡಿಸಬೇಕಿದೆ ಎಂದರು. ಧಾರ್ಮಿಕ ನಂಬಿಕೆ ಹಾಗೂ ವೈಯಕ್ತಿಕ ಸಂಪ್ರದಾಯಗಳ ಆಚರಣೆಗೆ ಸಂವಿಧಾನವು ಅಧಿಕಾರ ನೀಡಿದೆ. ಆದರೂ ತ್ರಿವಳಿ ತಲಾಖ್‌ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಿ ಈಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿದೆ. ಈ ಬಗ್ಗೆ ಶರಿಯಾ ತನ್ನ ವಾದವನ್ನು ಸಮರ್ಥವಾಗಿ ಮಂಡಿಸುತ್ತಿದೆ. ತ್ರಿವಳಿ ತಲಾಖ್‌ ಪದ್ಧತಿಯಿಂದ ಶರಿಯಾದಲ್ಲಿ
ಮಹಿಳೆಗೆ ಶೋಷಣೆಯಾಗುತ್ತಿದೆ ಎಂಬ ತಪ್ಪು ತಿಳಿವಳಿಕೆ ಅನ್ಯ ಸಮುದಾಯಕ್ಕೆ ಹೋಗುತ್ತಿದೆ. ಇದನ್ನು ತಪ್ಪಿಸಲು ಇಸ್ಲಾಂ ಧರ್ಮದ ಶಾಂತಿ ಹಾಗೂ ಸಹೋದರತ್ವದ ಸಂದೇಶವನ್ನು ಸಾರಬೇಕು. ತ್ರಿವಳಿ ತಲಾಖ್‌ ವಿರೋಧಿಸಬೇಕೆಂದರು.

ಪವಿತ್ರ ಕುರಾನ್‌ ಹಾಗೂ ಶರಿಯಾ ಕಾನೂನನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಅವಕಾಶವಿಲ್ಲ. ನಮ್ಮ ನಂಬಿಕೆ ಹಾಗೂ ಆಚರಣೆಗಳಿಗೆ ಯಾವುದೇ ಅಡೆ, ತಡೆ ಆಗದು. ಈ ಬಗ್ಗೆ ಸಮುದಾಯದವರು ಭಯಪಡಬಾರದು ಎಂದರು.

ಮೌಲಾನಾ ಜಾವೇದ್‌ ಆಲಂ ಖಾಶ್ಮಿ ಮಾತನಾಡಿ, ಮುಸ್ಲಿಂ ಸಮುದಾಯದವರು ಪರಸ್ಪರ ಕಚ್ಚಾಡುವುದನ್ನು ಬಿಟ್ಟು ಐಕ್ಯತೆ ಹಾಗೂ
ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಯುವಕರು ಮೊಬೈಲ್‌ ಹಾಗೂ ಇಂಟರ್‌ನೆಟ್‌ನಲ್ಲಿಯೇ ಪ್ರತಿದಿನ ಆರು ಗಂಟೆಗಳ ಕಾಲ ಕಳೆಯುತ್ತಿದ್ದು, ಅದನ್ನು ತಡೆಯದಿದ್ದರೇ ಸಮಾಜಕ್ಕೆ ಅಪಾಯವಿದೆ ಎಂದು ಎಚ್ಚರಿಸಿದರು. ಹಿರಿಯ ನ್ಯಾಯವಾದಿ ಉಸ್ತಾದ್‌ ಸಾದತ್‌
ಹುಸೇನ್‌, ಇಸ್ಲಾಮಿಕ್‌  ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲೀದ್‌ ಸೈಫ್‌ ಉಲ್‌ ರೆಹಮಾನಿ, ನ್ಯಾಯವಾದಿ ಅನ್ವರ್‌ ಪಟೇಲ್‌ ಹಾಗೂ ಇತರರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next