Advertisement
ದೇಶವು ಉಗ್ರರ ವಶವಾದ ಬಳಿಕ ಮಂಗಳವಾರ ರಾತ್ರಿ ಮೊದಲ ಪತ್ರಿಕಾಗೋಷ್ಠಿ ನಡೆಸಿದ ತಾಲಿಬಾನ್ ತನ್ನ “ಕರಾಳ ಆಡಳಿತ’ದ ಗುಟ್ಟನ್ನು ಬಿಟ್ಟು ಕೊಟ್ಟಿದೆ.
Related Articles
Advertisement
ಇನ್ನೊಂದೆಡೆ, ಕಾಶ್ಮೀರವನ್ನು ನಾವು ದ್ವಿಪಕ್ಷೀಯ ಮತ್ತು ಆಂತರಿಕ ವಿಚಾರ ಎಂದು ಪರಿಗಣಿಸುತ್ತೇವೆ. ಹಾಗಾಗಿ ನಾವು ಕಾಶ್ಮೀರದ ಬಗ್ಗೆ ಗಮನಹರಿಸುವುದಿಲ್ಲ ಎಂದೂ ತಾಲಿಬಾನ್ ಸ್ಪಷ್ಟಪಡಿಸಿದೆ.
ಏನಿದು ಶರಿಯಾ ಕಾನೂನು? :
ಶರಿಯಾ ಎಂದರೆ ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆ. ಪ್ರಾರ್ಥನೆ, ಉಪವಾಸ, ದಾನ ಸಹಿತ ಮುಸ್ಲಿಮರ ಜೀವನಕ್ರಮ ಹೇಗಿರಬೇಕೆಂದು ತಿಳಿಸುವ ಸಂಹಿತೆ. ಕೌಟುಂಬಿಕ ಕಾನೂನು, ಹಣಕಾಸು, ಉದ್ದಿಮೆ ಸಹಿತ ಪ್ರತಿಯೊಂದು ವಿಚಾರದ ಬಗ್ಗೆ ಶರಿಯಾದಲ್ಲಿ ಪ್ರಸ್ತಾವವಿರುತ್ತದೆ. ಅಪರಾಧಿಗಳಿಗೆ ಕಠಿನ ಶಿಕ್ಷೆಯನ್ನೂ ಉಲ್ಲೇಖೀಸಲಾಗಿರುತ್ತದೆ. ಕಳ್ಳತನ ಮಾಡಿದವರು, ವ್ಯಭಿಚಾರಿಗಳು ಇತ್ಯಾದಿ ಅಪರಾಧಿಗಳನ್ನು ಅತ್ಯಂತ ಕಠಿನ ಶಿಕ್ಷೆಗಳಿಂದ ದಂಡಿಸಲಾಗುತ್ತದೆ.
ಭಯ ಬಿಡಿ, ನಮ್ಮೊಂದಿಗೆ ಸೇರಿ! :
ಇಡೀ ಅಫ್ಘಾನಿಸ್ಥಾನವು ಅರಾಜಕತೆ ಮತ್ತು ಅಸ್ಥಿರತೆಯ ಭೀತಿ ಎದುರಿಸುತ್ತಿರುವಂತೆಯೇ ತನ್ನ ನಾಗರಿಕರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನಕ್ಕೆ ತಾಲಿಬಾನ್ ಕೈಹಾಕಿದೆ. ಭಯ ಬಿಟ್ಟು ಎಲ್ಲ ಸರಕಾರಿ ಉದ್ಯೋಗಿಗಳೂ ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದೆ. ವಿಶೇಷವೆಂದರೆ, ಇಸ್ಲಾಮಿಕ್ ಎಮಿರೇಟ್ಸ್ (ಅಫ್ಘಾನ್‌ಗೆ ತಾಲಿಬಾನಿ ಹೆಸರು) ಮಹಿಳೆಯರನ್ನು ಬಲಿಪಶುಗಳಾಗಬೇಕೆಂದು ಬಯಸುವುದಿಲ್ಲ. ಮಹಿಳೆಯರು ಕೂಡ ಶರಿಯಾ ಕಾನೂನಿನ ಪ್ರಕಾರ ನಮ್ಮ ಸರಕಾರದ ಭಾಗವಾಗಬಹುದು ಎಂದೂ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮನ್‌ಗಾನಿ ಹೇಳಿದ್ದಾನೆ.
ಮಂಗಳವಾರ ಕಾಬೂಲ್ ಹೇಗಿತ್ತು? :
- ಎಪಿ ನ್ಯೂಸ್ ಏಜೆನ್ಸಿ ಪ್ರಕಾರ ತಾಲಿಬಾನಿಗಳ ಹಿರಿಯ ಮುಖಂಡ ಅಮೀರ್ ಖಾನ್ ಮುತಖೀ ಕಾಬೂಲ್‌ನ ರಾಜಕಾರಣಿಗಳೊಂದಿಗೆ ಸರಕಾರ ರಚಿಸುವ ಸಂಧಾನ ಸೂತ್ರಕ್ಕೆ ಮುಂದಾಗಿದ್ದಾನೆ.
- ಕಾಬೂಲ್ ವಿಮಾನ ನಿಲ್ದಾಣದ ರನ್ ವೇ ಈಗ ವಿಮಾನಗಳ ಆಗಮನ -ನಿರ್ಗಮನಕ್ಕೆ ಸಿದ್ಧವಾಗಿದೆ. ವಿಮಾನಗಳಲ್ಲಿ ತೆರಳಲು ನೂಕುನುಗ್ಗಲು ಮಂಗಳವಾರವೂ ಕೆಲವೆಡೆ ನಡೆದಿದೆ.
- ಪ್ರಸ್ತುತ ಕಾಬೂಲ್‌ನ ಮೇಯರ್ ಹಾಗೂ ಆರೋಗ್ಯ ಸಚಿವರು ಕೆಲಸಕ್ಕೆ ಹಾಜರಾಗಿದ್ದಾರೆ. ಹಾಗಾಗಿ ಜನರು ಬಹಳ ಎಚ್ಚರಿಕೆ ಮತ್ತು ಹಿಂಜರಿಕೆಯಿಂದ ರಸ್ತೆಗಿಳಿದರು. ಮಹಿಳೆಯರೂ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗೆಂದು ಭಯ ಪೂರ್ತಿಯಾಗಿ ಹೋಗಿಲ್ಲ.
- ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಇಳಿದಿದ್ದಾರೆ.
- ಶಾಲೆ-ಕಾಲೇಜು ಸದ್ಯ ಆರಂಭ ಸಾಧ್ಯತೆ ಇಲ್ಲ.
- ಯಾರೂ ಕಾರುಗಳನ್ನು ಕದಿಯಬಾರದು ಮತ್ತು ವಸತಿ ಪ್ರದೇಶಗಳನ್ನು ಹಾನಿಗೊಳಿಸಬಾರದು ಎಂದು ತಾಲಿಬಾನಿಗಳ ನಾಯಕರು ತಮ್ಮ ತಂಡದವರಿಗೆ ತಿಳಿಸಿದ್ದಾರಂತೆ. ಮಿಲಿಟರಿ ಕಾರ್ಯಾಚರಣೆಯ ಮುಖ್ಯಸ್ಥ ಮುಲ್ಲಾ ಯಾಕೂಬ್ ಲೋಕಲ್ ಟಿವಿ ಟೋಲೋ ನ್ಯೂಸ್ ಮೂಲಕ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.