ಮುಂಬಯಿ: ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ನಿಧಾನಗತಿಯ ವಹಿವಾಟು ನಡೆಸಿದ ಪರಿಣಾಮ ಗುರುವಾರ(ಏಪ್ರಿಲ್ 22) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 500 ಅಂಕ ಕುಸಿತ ಕಂಡಿದೆ. ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಚ್ ಯುಎಲ್ ಷೇರುಗಳು ಭಾರೀ ನಷ್ಟ ಅನುಭವಿಸಿದೆ.
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 501 ಅಂಕ ಕುಸಿತ ಕಂಡಿದ್ದು, ನಂತರ 463.36ಅಂಕ ಕುಸಿತ ಕಂಡಿದ್ದು,47,242.44 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 130.10 ಅಂಕ ಕುಸಿತವಾಗಿದ್ದು, 14,166.30ರ ಗಡಿಗೆ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯಿಂದಗಿ ಇಂಡಸ್ ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಆ್ಯಕ್ಸಿಸ್ ಬ್ಯಾಂಕ್, ಎಚ್ ಯುಎಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಶೇ.3ರಷ್ಟು ನಷ್ಟ ಅನುಭವಿಸಿದೆ.
ಡಾ.ರೆಡ್ಡೀಸ್ ಸನ್ ಫಾರ್ಮಾ, ಒಎನ್ ಜಿಸಿ, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿವೆ. ಮಂಗಳವಾರ(ಏಪ್ರಿಲ್ 20) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 243,62 ಅಂಕ ಕುಸಿತವಾಗಿ 47,705.80 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು.