ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಷೇರು ಖರೀದಿಯಲ್ಲಿ ಆಸಕ್ತಿ ವಹಿಸದ ಪರಿಣಾಮ ಬುಧವಾರ(ಮಾರ್ಚ್ 24) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ಪ್ರಚೋದನಕಾರಿ ಭಾಷಣದ ಆರೋಪ: ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 325.15 ಅಂಕ ಕುಸಿತ ಕಂಡಿದ್ದು, 49,726.29 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 94.60 ಅಂಕ ಕುಸಿತವಾಗಿದ್ದು, 14,720.15ರ ಗಡಿಗೆ ಕುಸಿದಿದೆ.
ಷೇರುಪೇಟೆ ಸೆನ್ಸೆಕ್ಸ್ ಕುಸಿತದಿಂದ ಒಎನ್ ಜಿಸಿ, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿವೆ. ಏತನ್ಮಧ್ಯೆ ಏಷ್ಯನ್ ಪೈಂಟ್ಸ್, ಡಾ.ರೆಡ್ಡೀಸ್ ಪವರ್ ಗ್ರಿಡ್ ಮತ್ತು ಸನ್ ಫಾರ್ಮಾ ಷೇರುಗಳು ಲಾಭ ಗಳಿಸಿವೆ.
ಮಂಗಳವಾರ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಆಸಕ್ತಿ ವಹಿಸಿದ ಪರಿಣಾಮ ಷೇರುಪೇಟೆ ಸಂವೇದಿ ಸೂಚ್ಯಂಕ 280.15 ಅಂಕಗಳ ಏರಿಕೆ ಕಂಡು, 50,151.44ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ನಿಫ್ಟಿ 78.35 ಅಂಕ ಏರಿಕೆಯಾಗಿ 14,814.75ರಲ್ಲಿ ಕೊನೆಗೊಂಡಿತ್ತು.