ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟಿನ ಪರಿಣಾಮ ಶುಕ್ರವಾರ(ಜೂನ್ 18) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 200 ಅಂಕಗಳಷ್ಟು ಏರಿಕೆಯಾಗಿದೆ. ಇದರಿಂದ ಇನ್ಫೋಸಿಸ್, ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 220.53 ಅಂಕಗಳಷ್ಟು ಏರಿಕೆಯಾಗಿದ್ದು, 52,543.86 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 53.70 ಅಂಕ ಏರಿಕೆಯಾಗಿದ್ದು, 15,745.10ರ ಗಡಿ ದಾಟಿದೆ.
ಸೆನ್ಸೆಕ್ಸ್ 200 ಅಂಕ ಏರಿಕೆಯಾಗಿದ್ದರೂ ಒಎನ್ ಜಿಸಿ, ಪವರ್ ಗ್ರಿಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಮಾರುತಿ, ಎಲ್ ಆ್ಯಂಡ್ ಟಿ, ಎನ್ ಟಿಪಿಸಿ ಮತ್ತು ಟೈಟಾನ್ ಷೇರುಗಳು ನಷ್ಟ ಅನುಭವಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ, ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಡಾ.ರೆಡ್ಡೀಸ್ ಷೇರು ಲಾಭ ಗಳಿಸಿದೆ.
ಜಗತ್ತಿನ ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೋ ಷೇರುಮಾರುಕಟ್ಟೆ ಧನಾತ್ಮಕ ವಹಿವಾಟು ನಡೆಸಿದ್ದು, ಶಾಂಘೈ ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿರುವುದಾಗಿ ವರದಿ ತಿಳಿಸಿದೆ.