Advertisement

ರೆಪೋ ದರ ಯಥಾಸ್ಥಿತಿ: ಮುಂಬಯಿ ಷೇರುಮಾರುಕಟ್ಟೆ ಸೆನ್ಸೆಕ್ಸ್ 460 ಅಂಕ ಏರಿಕೆ

05:46 PM Apr 07, 2021 | Team Udayavani |

ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ(ಏಪ್ರಿಲ್ 07) ರೆಪೋ ದರವನ್ನು ಶೇ.4ರಷ್ಟು ಯಥಾಸ್ಥಿತಿಯಲ್ಲಿ ಮುಂದುವರಿಸಿದ ಪರಿಣಾಮ ಮುಂಬಯಿ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ 460 ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

Advertisement

ಮುಂಬಯಿ ಸಂವೇದಿ ಸೂಚ್ಯಂಕ 460.37 ಅಂಕ ಏರಿಕೆಯಾಗಿದ್ದು 49,661.76 ಅಂಕದೊಂದಿಗೆ ದಿನದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 135.55 ಅಂಕ ಏರಿಕೆಯಾಗಿದ್ದು, 14,819ರ ಗಡಿ ತಲುಪಿದೆ.

ಎಸ್ ಬಿಐ, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಆಟೋ ಮತ್ತು ಮಾರುತಿ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಟೈಟಾನ್, ಎನ್ ಟಿಪಿಸಿ ಮತ್ತು ಎಚ್ ಯುಎಲ್ ಷೇರುಗಳು ನಷ್ಟ ಅನುಭವಿಸಿದೆ.

ಆರ್ ಬಿಐ ಇಂದು 2021-22ನೇ ಸಾಲಿನ ಹಣಕಾಸು ನೀತಿಯನ್ನು ಪರಿಶೀಲನೆ ನಡೆಸಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿಯೇ ಮುಂದುವರಿಸಿದ್ದು, ಇದರ ಪರಿಣಾಮ ಷೇರುಪೇಟೆಯಲ್ಲಿ ಹೂಡಿಕೆದಾರರು ಷೇರು ಖರೀದಿ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next