Advertisement

ಗರಿಷ್ಠ ದಾಖಲೆ ಏರಿಕೆ ಬೆನ್ನಲ್ಲೇ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ

03:17 PM Sep 28, 2021 | Team Udayavani |

ಮುಂಬಯಿ: ಬಾಂಬೆ ಷೇರುಪೇಟೆಯಲ್ಲಿ ಮಂಗಳವಾರ(ಸೆಪ್ಟೆಂಬರ್ 28) ಮಧ್ಯಂತರದಲ್ಲಿ ಭರ್ಜರಿ ಷೇರು ಮಾರಾಟದ ಒತ್ತಡದ ಹಿನ್ನೆಲೆಯಲ್ಲಿ ಸಂವೇದಿ ಸೂಚ್ಯಂಕ 1000.50 ಅಂಕಗಳ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 59,081.80 ಅಂಕಗಳಲ್ಲಿ ವಹಿವಾಟು ನಡೆಸಿದೆ.

Advertisement

ಇದನ್ನೂ ಓದಿ:ಮುಖ್ಯಮಂತ್ರಿಯವರೇ ಮಂಗಳೂರಿನಲ್ಲಿರುವುದು ತಾಲಿಬಾನ್ ಸರ್ಕಾರವೇ?: ಸಿದ್ದರಾಮಯ್ಯ

ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 272.25 ಅಂಕ ಕುಸಿತ ಕಂಡಿದ್ದು, 17,584.80 ಅಂಕಗಳಿಗೆ ಇಳಿಕೆಯಾಗಿದೆ. ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಶದ ಕೈಗಾರಿಕೆಗಳಿಗೆ ಪೂರೈಸುವ ವಿದ್ಯುತ್ ಕಡಿತಗೊಳಿಸುವುದಾಗಿ ಚೀನಾ ಹೇಳಿಕೆ ನೀಡಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸೆನ್ಸೆಕ್ಸ್ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡರೂ ಎನ್ ಟಿಪಿಸಿ, ಪವರ್ ಗ್ರಿಡ್, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ ಷೇರುಗಳು ಲಾಭಗಳಿಸಿದ್ದು, ಎಚ್ ಸಿಎಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next