Advertisement
ಮಳೆಗಾಲದ ಸಂದರ್ಭ ಅಣೆಕಟ್ಟುವಿನ ಇಕ್ಕೆಲಗಳಲ್ಲಿ ತಡೆಗೋಡೆ ಕುಸಿದು ಅಕ್ಕ ಪಕ್ಕದ ಕೃಷಿಭೂಮಿಗಳು ನೀರು ಪಾಲಾಗಿದ್ದವು. ಇವುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಬಾಗದಲ್ಲಿ ಆ ಭಾಗದ ಜಿಲ್ಲಾಡಳಿತ ಹಾಗೂ ಇಲಾಖೆ ನೂತನ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದರೂ ಉಡುಪಿ ಭಾಗದಲ್ಲಿನ ಕುಸಿತದ ಬಗ್ಗೆ ಇಲ್ಲಿನ ಜಿಲ್ಲಾಡಳಿತ ಹಾಗೂ ಇಲಾಖೆ ತಲೆ ಕೆಡಿಸದಿರುವುದು ಈ ಭಾಗದ ಕೃಷಿಕರ ಬೇಸರಕ್ಕೆ ಕಾರಣವಾಗಿದೆ.
ಸಂಕಲಕರಿಯ ಮೇರಿ ರೋಮನ್ ಸೆರಾವೋರವರ ಗದ್ದೆ ಅರ್ಧಕ್ಕೂ ಹೆಚ್ಚು ಕುಸಿದು ಅಣೆಕಟ್ಟುವಿನ ಪರಿಣಾಮ ಇದೀಗ ಆ ಕುಟುಂಬ ಪರಿತಪಿಸುವಂತಾಗಿದೆ. ಈಗಾಗಲೇ ಪಂಚಾಯತ್ ಮಟ್ಟದಿಂದ ಹಿಡಿದು ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದ್ದು ಯಾರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Related Articles
Advertisement