ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಸೋಮವಾರ(ಜೂನ್ 14) ಮುಂಬಯಿ ಷೇರುಪೇಟೆಯ 77ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ರಿಲಯನ್ಸ್, ಟಿಸಿಎಸ್, ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:ಬಾಕಿ ಬಿಲ್ ಪಾವತಿಸದಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಆಸ್ಪ ತ್ರೆ ವಿರುದ್ಧ ಆಕ್ರೋಶ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 76.77 ಅಂಕ ಏರಿಕೆಯಾಗಿದ್ದು, 52,551.53 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 12.50 ಅಂಕ ಏರಿಕೆಯಾಗಿದ್ದು, 15,811.85ರ ಗಡಿ ದಾಟಿದೆ.
ಸೆನ್ಸೆಕ್ಸ್ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಒಎನ್ ಜಿಸಿ, ಇನ್ಫೋಸಿಸ್, ಪವರ್ ಗ್ರಿಡ್, ಎಲ್ ಆ್ಯಂಡ್ ಟಿ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಕೋಟಕ್ ಬ್ಯಾಂಕ್, ಎನ್ ಟಿಪಿಸಿ, ಎಚ್ ಡಿಎಫ್ ಸಿ, ಸನ್ ಫಾರ್ಮಾ, ಬಜಾಜ್ ಆಟೋ, ಮಾರುತಿ ಷೇರುಗಳು ನಷ್ಟ ಅನುಭವಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ವಹಿವಾಟಿನಲ್ಲಿ ಷೇರು ಸೂಚ್ಯಂಕ ಇಳಿಕೆ ಕಂಡಿತ್ತು. ಅದೇ ರೀತಿ ನಿಫ್ಟಿ ಕೂಡಾ ಇಳಿಕೆಯಾಗಿತ್ತು. ಜಾಗತಿಕ ಮಾರುಕಟ್ಟೆ ಟ್ರೆಂಡ್ ಬಳಿಕ ಸೆನ್ಸೆಕ್ಸ್ ಏರಿಕೆಯಾಗಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.