ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ (ಎ.01) ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುವ ಮೂಲಕ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ ಏರಿಕೆ ಕಂಡಿದೆ.
ಇದನ್ನೂ ಓದಿ:Tax; ಎ.1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ: ಸರ್ಕಾರದ ಸ್ಪಷ್ಟನೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 470.45 ಅಂಕ ಏರಿಕೆಯಾಗಿದ್ದು, 74,122.82 ಅಂಕಗಳ ಮಟ್ಟ ತಲುಪಿದೆ. ಮತ್ತೊಂದೆಡೆ ಎನ್ ಎಸ್ ಸಿ ನಿಫ್ಟಿ 166.40 ಅಂಕಗಳಷ್ಟು ಏರಿಕೆಯೊಂದಿಗೆ 22,493.30 ಅಂಕಗಳ ಗಡಿ ತಲುಪಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸಂವೇದಿ ಸೂಚ್ಯಂಕ ದಾಖಲೆ ಮಟ್ಟದ 74,254.62 ಅಂಕಗಳ ಗಡಿಗೆ ಏರಿಕೆಯಾಗಿತ್ತು. ಎಮ್ ಎಸ್ ಇ ನಿಫ್ಟಿ 50 ಅಂಕಗಳ ಏರಿಕೆಯೊಂದಿಗೆ 22,539.95 ಅಂಗಳ ಗಡಿ ದಾಟಿತ್ತು.
ಸಂವೇದಿ ಸೂಚ್ಯಂಕ ಏರಿಕೆಯಿಂದ ಬ್ಯಾಂಕಿಂಗ್, ಫೈನಾನ್ಶಿಯಲ್ ಮತ್ತು ಐಟಿ ಷೇರುಗಳು ಭಾರೀ ಲಾಭಗಳಿಸಿವೆ. ಜೆಎಸ್ ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಅಪೋಲೊ ಆಸ್ಪತ್ರೆಗೆಳು, ಅದಾನಿ ಪೋರ್ಟ್ಸ್, ಎಲ್ ಆಂಡ್ ಟೀ ಷೇಉಗಳು ಲಾಭಗಳಿಸಿವೆ.
ಮತ್ತೊಂದೆಡೆ ಟೈಟಾನ್, ಬಜಾಜ್ ಆಟೋ, ಹೀರೋ ಮೋಟೊಕಾರ್ಪ್, ನೆಸ್ಲೆ ಇಂಡಿಯಾ ಮತ್ತು ಭಾರ್ತೀ ಷೇರುಗಳು ನಷ್ಟ ಕಂಡಿವೆ. ಜಾಗತಿಕ ಷೇರು ಮಾರುಕಟ್ಟೆಯ ವಹಿವಾಟಿನ ಪರಿಣಾಮ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಭಾರೀ ಜಿಗಿತ ಕಂಡಿದೆ.