ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ (ಡಿಸೆಂಬರ್ 27) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಭಾರತ-ದ.ಆಫ್ರಿಕಾ ಟೆಸ್ಟ್: ಸೆಂಚೂರಿಯನ್ ನಲ್ಲಿ ಎರಡನೇ ದಿನದಾಟಕ್ಕೆ ಮಳೆ ಕಾಟ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 334.86ಅಂಕಗಳಷ್ಟು ಏರಿಕೆಯೊಂದಿಗೆ 57,459.17 ಅಂಕಗಳಲ್ಲಿ ವಹಿವಾಟನ್ನು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 92.50 ಅಂಕ ಏರಿಕೆಯಾಗಿದ್ದು, 17,096.30 ಅಂಕಗಳ ಮಟ್ಟ ತಲುಪಿದೆ.
ಟೆಕ್ ಮಹೀಂದ್ರಾ, ಸಿಪ್ಲಾ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಯುಪಿಎಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಹಿಂಡಲ್ಕೋ ಇಂಡಸ್ಟ್ರೀಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಒಎನ್ ಜಿಸಿ ಷೇರುಗಳು ನಷ್ಟ ಕಂಡಿದೆ.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 444,83 ಅಂಕ ಇಳಿಕೆಯಾಗಿದ್ದು, 56,679.48 ಅಂಕಗಳೊಂದಿಗೆ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 128.40 ಅಂಕ ಕುಸಿತದೊಂದಿಗೆ 16,875.35 ಅಂಕಗಳ ಮಟ್ಟ ತಲುಪಿತ್ತು.