ಮುಂಬೈ: ಬಾಂಬೆ ಷೇರುಪೇಟೆಯ ಸೋಮವಾರ(ಸೆ.12)ದ ಆರಂಭಿ ವಹಿವಾಟಿನಲ್ಲಿ ಈಕ್ವಿಟಿ ಸೂಚ್ಯಂಕ ಧನಾತ್ಮಕ ವಹಿವಾಟಿನೊಂದಿಗೆ ಆರಂಭಗೊಂಡಿದ್ದು, ಬಿಎಸ್ ಇ ಸೆನ್ಸೆಕ್ಸ್ 379.80 ಅಂಕಗಳ ಏರಿಕೆಯೊಂದಿಗೆ 67,506.88 ಅಂಕಗಳಲ್ಲಿ ವಹಿವಾಟು ನಡೆದಿದೆ.
ಇದನ್ನೂ ಓದಿ:Snake: ತುಂಗಾ ನದಿಯಲ್ಲಿ ಹೆಬ್ಬಾವು ಪತ್ತೆ…! ಜನರಲ್ಲಿ ಆತಂಕ… ಅರಣ್ಯ ಅಧಿಕಾರಿಗಳು ದೌಡು
ಅದೇ ರೀತಿ ಎನ್ ಎಸ್ ಇ ನಿಫ್ಟಿ 0.56 ಅಂಕಗಳ ಏರಿಕೆಯೊಂದಿಗೆ ದಾಖಲೆಯ 20,110.15 ಅಂಕಗಳ ವಹಿವಾಟಿನಲ್ಲಿ ಮುಂದುವರಿದಿದೆ. ಇಂದಿನ ವಹಿವಾಟಿನಲ್ಲಿ ಎಲ್ & ಟಿ ಮತ್ತು ಟಿಸಿಎಸ್ ಷೇರು ಅಧಿಕ ಲಾಭಗಳಿಸಿದೆ.
ಎನ್ ಎಸ್ ಸಿ ಮತ್ತು ಬಿಎಸ್ ಇ ಅಂಕಗಳ ಏರಿಕೆಯ ಪರಿಣಾಮ ಐಆರ್ ಎಫ್ ಸಿ, ರೈಲ್ ವಿಕಾಸ್ ನಿಗಮ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿವೆ. ಇನ್ನುಳಿದಂತೆ ಐಟಿ ಸೆಕ್ಟರ್ ಹೊರತುಪಡಿಸಿ ಆಟೋ, ಇಂಧನ, ತೈಲ ಮತ್ತು ಅನಿಲ ಸೆಕ್ಟರ್ ಷೇರುಗಳು ನಷ್ಟ ಕಂಡಿವೆ.
ಮತ್ತೊಂದೆಡೆ ಫಿನ್ ಟೆಕ್ ಪ್ಲ್ಯಾಟ್ ಫಾರಂ ರಜೋರ್ ಪೇ ಮುಂಬೈ ಮೂಲದ ಡಿಜಿಟಲ್ ಇನ್ ವೈಸಿಂಗ್ ಸ್ಟಾರ್ಟ್ ಅಪ್ ಬಿಲ್ ಮಿ(BillMe) ಅನ್ನು ಖರೀದಿಸಿದೆ. ಆದರೆ ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.