Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 214 ಅಂಕ ಕುಸಿತ, ನಿಫ್ಟಿ 56 ಅಂಕ ಇಳಿಕೆ

05:03 PM Sep 01, 2021 | Team Udayavani |

ಮುಂಬಯಿ: ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬುಧವಾರ (ಸೆಪ್ಟೆಂಬರ್ 01) 214.18 ಅಂಕಗಳ ಕುಸಿತದೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 55.95 ಅಂಕ ಇಳಿಕೆಯಾಗಿದೆ.

Advertisement

ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 214.18 ಅಂಕ ಕುಸಿತ ಕಂಡಿದ್ದು, 57,338.21 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅಲ್ಲದೇ ಎನ್ ಎಸ್ ಇ ನಿಫ್ಟಿ 55.95 ಅಂಕ ಕುಸಿತದೊಂದಿಗೆ 17,076.25 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.

ಸೆನ್ಸೆಕ್ಸ್ ಕುಸಿತದ ಹೊರತಾಗಿಯೂ ಏಷ್ಯನ್ ಪೇಂಟ್ಸ್ (ಶೇ.3.10), ನೆಸ್ಲೆ (ಶೇ.1.73), ಆ್ಯಕ್ಸಿಸ್ ಬ್ಯಾಂಕ್ (ಶೇ.1.51) ಷೇರುಗಳು ಲಾಭಗಳಿಸಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್ ಷೇರುಗಳು ನಷ್ಟ ಕಂಡಿದೆ.

ಮಂಗಳವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 662 ಅಂಕಗಳ ಏರಿಕೆಯೊಂದಿಗೆ 57,625 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಇದು ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆಯ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next