Advertisement

ನಿರೀಕ್ಷೆ ಮೂಡಿಸಿದ ಇನ್ಫೋಸಿಸ್; ಮುಂಬೈ ಶೇರುಮಾರುಕಟ್ಟೆ ಸೆನ್ಸೆಕ್ಸ್ 250 ಅಂಕ ಏರಿಕೆ

09:56 AM Jan 14, 2020 | Nagendra Trasi |

ಮುಂಬೈ:ಇನ್ಫೋಸಿಸ್ ಮಾರುಕಟ್ಟೆ ಮೇಲಿನ ನಿರೀಕ್ಷೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರ್ಪೋರೇಟ್ ಗಳಿಕೆ ಆಶಾದಾಯಕ ಭರವಸೆ ಮೂಡಿಸಿರುವ ನಿಟ್ಟಿನಲ್ಲಿ ಸೋಮವಾರ ಮುಂಬೈ ಶೇರುಮಾರುಕಟ್ಟೆಯ ಆರಂಭಿಕ ವಹಿವಾಟು ಭರ್ಜರಿ ಚೇತರಿಕೆ ಕಂಡಿದೆ.

Advertisement

ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 207.28 ಅಂಕಗಳಷ್ಟು ಏರಿಕೆ ಕಂಡಿದ್ದು 41,807.00 ಅಂಕಗಳ ವಹಿವಾಟು ನಡೆಸಿದೆ.

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 52.25 ಅಂಕಗಳೊಂದಿಗೆ 12,309.05 ಅಂಕಗಳ ದಾಖಲೆಯ ಗಡಿದಾಟಿದೆ ಎಂದು ಶೇರುಮಾರುಕಟ್ಟೆ ವರದಿ ತಿಳಿಸಿದೆ. ಇಂದಿನ ಶೇರುಮಾರುಕಟ್ಟೆ ವಹಿವಾಟಿನಲ್ಲಿ ಬ್ಯಾಂಕಿಂಗ್, ಐಟಿ, ಮೆಟಲ್ ಮತ್ತು ಔಷಧೀಯ ಮಾರಾಟ ವಸ್ತುಗಳ ಶೇರುಗಳು ಅಧಿಕ ಲಾಭಗಳಿಸಿವೆ.

ಶೇರುಮಾರುಕಟ್ಟೆ ವಹಿವಾಟು ಚೇತರಿಕೆ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎ ಅಂಡ್ ಟಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಗಳ ಕೊಡುಗೆ ಗಣನೀಯವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next