ಮುಂಬಯಿ: ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಷೇರುಪೇಟೆಯ ಸಕಾರಾತ್ಮಕ ಬೆಳವಣಿಗೆಯ ಪರಿಣಾಮ ಮಂಗಳವಾರ(ಮಾರ್ಚ್ 09) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಭರ್ಜರಿ ಏರಿಕೆ ಕಂಡಿದೆ.
ಇದನ್ನೂ ಓದಿ:ವಿ.ಎಸ್. ಪಾರ್ಥಸಾರಥಿ ಮಹೀಂದ್ರಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ..!
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 426 ಅಂಕ ಏರಿಕೆಯಾಗಿದ್ದು, 50, 866 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 131.15 ಅಂಕಗಳ ಏರಿಕೆಯೊಂದಿಗೆ 15,087ರ ಗಡಿ ತಲುಪಿದೆ.
ನಿಫ್ಟಿ ಮತ್ತೆ 15 ಸಾವಿರದ ಗಡಿ ದಾಟಿದ ಪರಿಣಾಮ ಎಸ್ ಬಿಐ ಲೈಫ್ ಇನ್ಸೂರೆನ್ಸ್, ಎಚ್ ಡಿಎಫ್ ಸಿ ಬ್ಯಾಂಕ್ ನಿಫ್ಟಿ ಷೇರುಗಳು ಲಾಭ ಗಳಿಸಿವೆ. ಬಜಾಜ್ ಫೈನಾನ್ಸ್, ಆಲ್ಟ್ರಾ ಟೆಕ್ ಸಿಮೆಂಟ್ಸ್, ಐಸಿಐಸಿಐ ಬ್ಯಾಂಕ್, ಶ್ರೀ ಸಿಮೆಂಟ್ಸ್, ಆ್ಯಕ್ಸಿಸ್ ಬ್ಯಾಂಕ್, ಟೈಟಾನ್ ಕಂಪನಿ, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ನಿಫ್ಟಿ ಲಾಭ ಗಳಿಸಿದೆ.
ಬಿಪಿಸಿಎಲ್ ನಿಫ್ಟಿ ಗರಿಷ್ಠ ಪ್ರಮಾಣದ ನಷ್ಟ ಕಂಡಿದ್ದು, ಅದೇ ರೀತಿ ಐಒಸಿ, ಒಎನ್ ಜಿಸಿ, ಪವರ್ ಗ್ರಿಡ್ ಕಾರ್ಪೋರೇಶನ್, ಯುಪಿಎಲ್, ಹೀರೋ ಮೋಟೊ ಕಾರ್ಪೋರೇಷನ್ ನಿಫ್ಟಿ ನಷ್ಟ ಕಂಡಿದೆ.