ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಗುರುವಾರ(ಜುಲೈ 15) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 255 ಅಂಕಗಳ ಏರಿಕೆಯೊಂದಿಗೆ ದಾಖಲೆ ಪ್ರಮಾಣದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಕೋವಿಡ್ ಬಿಕ್ಕಟ್ಟಿನಲ್ಲೂ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸಿಗುತ್ತಿದೆ 1 ಲಕ್ಷ ರೂ.ಬೋನಸ್..!
ಮುಂಬಯಿ ಷೇರುಪೇಟೆಯ ಬಿಎಸ್ ಇ ಸೆನ್ಸೆಕ್ಸ್ 254.75 ಅಂಕಗಳ ಏರಿಕೆಯೊಂದಿಗೆ ದಾಖಲೆ ಪ್ರಮಾಣದ 53,158.85 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಮಧ್ಯಂತರದ ವಹಿವಾಟಿನಲ್ಲಿ ದಾಖಲೆಯ 53,266.13ರ ಗಡಿ ದಾಟಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 70.25 ಅಂಕ ಏರಿಕೆಯಾಗಿದ್ದು, ದಾಖಲೆ ಪ್ರಮಾಣದ 15,924.20ರ ಗಡಿ ತಲುಪಿದೆ. ಮಧ್ಯಂತರ ನಿಫ್ಟಿ ವಹಿವಾಟಿನಲ್ಲಿ 15,952.35ರ ಗಡಿ ದಾಟಿತ್ತು.
ಸೆನ್ಸೆಕ್ಸ್ ಭರ್ಜರಿ ಏರಿಕೆಯಿಂದ ಎಚ್ ಸಿಎಲ್, ಎಲ್ ಆ್ಯಂಡ್ ಟಿ, ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್, ಐಟಿಸಿ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಮಹೀಂದ್ರ ಆ್ಯಂಡ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಟೈಟಾನ್ ಮತ್ತು ಸನ್ ಫಾರ್ಮಾ ಷೇರುಗಳು ನಷ್ಟ ಅನುಭವಿಸಿದೆ.