Advertisement
ಬೆಳಗ್ಗಿನ ಉಪಾಹಾರಕ್ಕೆ ಹೋಟೆಲ್‌ಗೆ ಹೋದರೆ ಮೂರು ಡಾಲರ್‌ಗಿಂತ ಹೆಚ್ಚು ಖರ್ಚನ್ನು ಈತ ಮಾಡಲಾರ. ವಸ್ತುಗಳನ್ನು ಕೊಂಡಾಗ ಅದರ ಜತೆ ಸಿಗುವ ಡಿಸ್ಕೌಂಟ್ ಕೂಪನ್‌ಗಳನ್ನು ಜತನದಿಂದ ಕಾಪಿಟ್ಟುಕೊಂಡು ಬಳಸುವ ವ್ಯಕ್ತಿ ಈತ. 50ಕ್ಕೂ ಹೆಚ್ಚು ವರ್ಷಗಳ ಕಾಲ ಒಂದೇ ಮನೆಯಲ್ಲಿ ಕಳೆದಾತ ಇವ. ಈತನ ಬಳಿ ಸ್ಮಾರ್ಟ್‌ಫೋನ್ ಕೂಡಾ ಇಲ್ಲ. ಅಂಥ ವ.Âಕ್ತಿಯೊಬ್ಬ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆಯ ಕುರಿತು ಜನಸಾಮಾನ್ಯರಿಗೆ ನೀಡಿರುವ ಟಿಪ್ಸ್ ಇಲ್ಲಿದೆ. ಸ್ಮಾರ್ಟ್‌ಫೋನ್ ಕೂಡಾ ಇಲ್ಲದ ವ್ಯಕ್ತಿಯೊಬ್ಬ ಟಿಪ್ಸ್, ಯಾರಿಗೆ ತಾನೇ ಉಪಯೋಗವಾದೀತು ಎಂದುಕೊಳ್ಳದಿರಿ. ಈತ 89.9 ಬಿಲಿಯನ್ ಡಾಲರ್, ಅಂದರೆ 8590 ಕೋಟಿ ಡಾಲರ್ ಸಂಪತ್ತಿನ ಒಡೆಯ. ಜಗತ್ತಿನ ಯಾವ ದೇಶದ ಅಧ್ಯಕ್ಷನೇ ಆದರೂ, ಪ್ರಧಾನಿಯೇ ಆದರೂ ವಾರೆನ್ ಬಫೆಟ್ ಹೇಳುವುದನ್ನು ಕೇಳುತ್ತಾರೆ.
ಹೂಡಿಕೆ ಎನ್ನುವುದು ನೂರು ಮೀಟರ್ ರೇಸ್ ಅಲ್ಲ. ಅದು ಮುಗಿಯದ ಮ್ಯಾರಾಥಾನ್ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಷೇರುಗಳನ್ನು ಮನಸ್ಸಿಗೆ ತೋಚಿದಾಗ ಮಾರುವುದು, ಕೊಳ್ಳುವುದು ಮಾಡುತ್ತಿದ್ದರೆ ಜೂಜಾಟಕ್ಕೂ ಹೂಡಿಕೆಗೂ ವ್ಯತ್ಯಾಸವೇ ಇರುವುದಿಲ್ಲ. ಆದರೆ ಶೇರು ಮಾರುಕಟ್ಟೆ ಎನ್ನುವುದು ಜೂಜಿನ ಅಡ್ಡೆಯಲ್ಲ. ಇಲ್ಲಿ ಯಶಸ್ಸು ಪಡೆಯಲು ಅತೀವ ತಾಳ್ಮೆ ಮತ್ತು ಬುದ್ಧಿವಂತಿಕೆ ಬೇಕಾಗುತ್ತದೆ. ಹತ್ತರಿಂದ ಮೂವತ್ತು ವರ್ಷಗಳವರೆಗಾದರೂ ಕಾಯುವ ವ್ಯವಧಾನವಿರಬೇಕು. – ವಿವಿಧತೆ ಮತ್ತು ಅನೇಕತೆಯಲ್ಲಿ ಲಾಭವಿದೆ
ನಮ್ಮ ಹಣವನ್ನು ಹೆಚ್ಚು ಸುರಕ್ಷಿತವಾಗಿಡಬೇಕೆಂದರೆ ಒಂದೇ ಕಡೆ ಹಣ ಹೂಡಬಾರದು. ಒಂದಕ್ಕಿಂತ ಹೆಚ್ಚು ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕು. ವಿವಿಧ ಕಂಪನಿಗಳ ಮೇಲೆ ಹಣ ಹೂಡಿದಷ್ಟೂ ರಿಸ್ಕ್ ಕಡಿಮೆಯಾಗುತ್ತಾ ಸಾಗುತ್ತದೆ. ಅಲ್ಲದೆ ತಿಂಗಳು ಬಿಟ್ಟು ತಿಂಗಳು, ವರ್ಷ ಬಿಟ್ಟು ವರ್ಷ ಹೀಗೆ ವಿವಿಧ ಸಮಯಗಳಲ್ಲಿ ಹಣ ಹೂಡುವುದರಿಂದಲೂ ಹಣದ ಸುರಕ್ಷತೆ ಹೆತ್ತುತ್ತದೆ.
Related Articles
ನಮ್ಮ ಉಳಿತಾಯದ ಹಣದಿಂದ ನಾವು ಭೂಮಿ ಕೊಳ್ಳಬಹುದು, ಮನೆ ಕೊಳ್ಳಬಹುದು, ಬಾಂಡ್ ಕೊಳ್ಳಬಹುದು. ಎಲ್ಲಕ್ಕಿಂತ ಒಳ್ಳೆಯ ನಡೆಯೆಂದರೆ ಯಾವುದೇ ಸಂಸ್ಥೆಯ ಶೇರುಗಳನ್ನು ಕೊಳ್ಳುವುದು. ಏಕೆಂದರೆ, ಉದಾಹರಣೆಗೆ 10 ವರ್ಷಗಳ ಬಾಂಡ್ ಕೊಂಡರೆ ಅದರಿಂದ ದೊರೆಯುವ ಲಾಭದ ಮೊತ್ತ ಬೆಳೆಯುವುದಿಲ್ಲ, ಅದು ಸೀಮಿತವಾದುದು ಕೂಡಾ. ಆದರೆ ಶೇರುಗಳು ಹಾಗಲ್ಲ.
Advertisement
– ಹೂಡಿಕೆಗೆ ರಾಹುಕಾಲ ಗುಳಿಕ ಕಾಲ ಇರುವುದಿಲ್ಲಶೇರುಗಳನ್ನು ಕೊಳ್ಳಲು ಒಳ್ಳೆಯ ಸಮಯ ಅಂತ ಇರುವುದಿಲ್ಲ. ಯಾವುದೇ ಸಂಸ್ಥೆಯ ಶೇರು ಮುಂದಿನ ಹತ್ತು ವರ್ಷಗಳಲ್ಲಿ ಲಾಭದಾಯಕ ಸ್ಥಾನದಲ್ಲಿರುತ್ತದೆ ಎಂದು ನಿಮಗೆ ಬಲವಾಗಿ ಅನ್ನಿಸಿದರೆ, ಒಳ್ಳೆಯ ಸಮಯ ನೋಡಿ ಕೊಳ್ಳುತ್ತೇನೆ ಎನ್ನುವುದು ಮೂರ್ಖತನ. “ಈಗಲೇ’ ಎನ್ನುವುದು ಇಲ್ಲಿನ ಮೂಲ ಮಂತ್ರ. – ಎಮೋಷನಲ್ ಆದರೆ ಏಟು ಬೀಳುತ್ತೆ
ಕೆಲ ಮಂದಿ ಶೇರುಗಳನ್ನು ಕೊಳ್ಳಲೇಬಾರದು ಅನ್ನುತ್ತಾರೆ. ಅವರು ಎಂಥವರೆಂದರೆ, ತಾವು ಕೊಂಡಿರುವ ಶೇರಿನ ಬೆಲೆ ಕುಸಿತ ಕಂಡಾಗಲೆಲ್ಲಾ ಚಡಪಡಿಸಿ, ಒಂದು ಕಣ್ಣಿನಲ್ಲಿ ಅಳುವವರು. ಅವರು ಅದೇ ಗುಂಗಿನಲ್ಲಿ ಶೇರುಗಳನ್ನು ಮಾರಿಬಿಡುತ್ತಾರೆ ಕೂಡಾ. ಹೀಗಾಗಿ, ಮಾರುಕಟ್ಟೆಯ ವಿಷಯದಲ್ಲಿ ಭಾವುಕತೆ ಇರಬಾರದು. ಎಂಥಾ ಪರಿಸ್ಥಿತಿ ಬಂದರೂ ಕಲ್ಲುಬಂಡೆಯಂತೆ ನಿಲ್ಲಬೇಕು. ಎಮೋಷನಲ್ ಆದರೆ ನಷ್ಟ ಕಟ್ಟಿಟ್ಟ ಬುತ್ತಿ. –ಹರಿಣಿ