ನವದೆಹಲಿ:ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್ ಪರಿಣಾಮ ಗುರುವಾರ(ಡಿಸೆಂಬರ್ 09) ಮುಂಬಯಿ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 157 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಮೈಸೂರು : ಆತಂಕ ಸೃಷ್ಟಿಸಿದ್ದ ಬಾಲಕಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 157.45 ಅಂಕ ಏರಿಕೆಯಾಗಿದ್ದು, 58,807.13 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಅಂತ್ಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 47.10 ಅಂಕಗಳಷ್ಟು ಏರಿಕೆಯೊಂದಿಗೆ 17,516.85 ಅಂಕಗಳ ಗಡಿ ತಲುಪಿದೆ.
ಐಟಿಸಿ, ಎಲ್ ಆ್ಯಂಡ್ ಟಿ, ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಫೈನಾನ್ಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಡಿಎಫ್ ಸಿ ಬ್ಯಾಂಕ್, ಟೈಟಾನ್, ನೆಸ್ಲೆ ಇಂಡಿಯಾ, ಎನ್ ಟಿಪಿಸಿ ಮತ್ತು ಪವರ್ ಗ್ರಿಡ್ ಷೇರು ನಷ್ಟ ಕಂಡಿದೆ.
ಇಂದು ಬೆಳಗ್ಗೆ ಷೇರುಪೇಟೆ ವಹಿವಾಟು ಆರಂಭದಲ್ಲಿ ಲಾಭಾಂಶವನ್ನು ಕಾಯ್ದಿರಿಸುವಲ್ಲಿ ಹೂಡಿಕೆದಾರರು ಮುಂದಾದ ಪರಿಣಾಮ ಸೆನ್ಸೆಕ್ಸ್, ನಿಫ್ಟಿ ಏರಿಳಿಕೆ ಕಂಡಿತ್ತು. ಆದರೆ ಬಳಿಕ ಜಾಗತಿಕ ಷೇರುಪೇಟೆಯ ಭರ್ಜರಿ ವಹಿವಾಟಿನ ನಂತರ ಏರಿಕೆಯ ಹಾದಿಗೆ ಮರಳಿದೆ ಎಂದು ಜಿಯೊಜಿಟ್ ಫೈನಾನ್ಶಿಯಲ್ ಸರ್ವಿಸ್ ನ ರಿಸರ್ಚ್ ಹೆಡ್ ವಿನೋದ್ ನಾಯರ್ ವಿಶ್ಲೇಷಿಸಿದ್ದಾರೆ.