ಮುಂಬಯಿ:ಜಾಗತಿಕ ಷೇರುಮಾರುಕಟ್ಟೆಯಲ್ಲಿ ಬ್ಯಾಂಕಿಂಗ್ ಮತ್ತು ಫೈನಶ್ಶಿಯಲ್ ಷೇರುಗಳು ಕುಸಿತ ಕಂಡ ಪರಿಣಾಮ ಶುಕ್ರವಾರ(ಫೆ.19, 2021) ಮುಂಬಯಿ ಷೇರುಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 250ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ತನ್ನ “ಪ್ಲೇ ಮ್ಯೂಸಿಕ್” ಸೇವೆಯನ್ನು ಕೊನೆಗೊಳಿಸಲಿದೆ ಗೂಗಲ್
ಮುಂಬಯಿ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 281.86 ಅಂಕಗಳಷ್ಟು ಕುಸಿತ ಕಂಡು 51,042.83 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 87.25 ಅಂಕ ಕುಸಿತ ಕಂಡಿದ್ದು, 15,031.70ರ ಗಡಿ ತಲುಪಿದೆ.
ಸತತ ಎರಡು ದಿನಗಳಿಂದ ಷೇರುಪೇಟೆ ವಹಿವಾಟು ಕುಸಿತ ಕಂಡ ಪರಿಣಾಮ ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಎನ್ ಟಿಪಿಸಿ, ಬಜಾಜ್ ಆಟೋ, ಮಾರುತಿ, ಬಜಾಜ್ ಫೈನಾನ್ಸ್ ಮತ್ತು ಎಸ್ ಬಿಐ ಷೇರುಗಳು ಶೇ.3ರಷ್ಟು ನಷ್ಟ ಅನುಭವಿಸಿದೆ.
ಮತ್ತೊಂದೆಡೆ ಎಚ್ ಯುಎಲ್, ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ ಟೆಲ್, ಎಲ್ ಆ್ಯಂಡ್ ಟಿ, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಸಿಎಲ್ ಟೆಕ್ ಷೇರುಗಳು ಲಾಭ ಗಳಿಸಿವೆ.
ಗುರುವಾರ(ಫೆ.18) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 379.14 ಅಂಕಗಳಷ್ಟು ಇಳಿಕೆ ಕಂಡಿದ್ದು, 51,324.69 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 89.95 ಅಂಕಗಳ ಇಳಿಕೆಯೊಂದಿಗೆ 15,118.95 ಅಂಕಗಳೊಂದಿಗೆ ವಹಿವಾಟು ಕೊನೆಗೊಂಡಿತ್ತು.