Advertisement

ಟೆಸ್ಟ್‌ಕ್ಯಾಪ್‌ ಧರಿಸಿದ ಕೆಲವೇ ನಿಮಿಷಗಳಲ್ಲಿ ಶಾರ್ದೂಲ್ ಗಾಯಾಳು!

11:40 AM Oct 13, 2018 | |

ಮುಂಬಯಿಯ ಪೇಸ್‌ ಬೌಲರ್‌ ಶಾರ್ದೂಲ್  ಠಾಕೂರ್‌ ಹೈದರಾಬಾದ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಮಿಶ್ರ ಫ‌ಲ ಅನುಭವಿಸಿದರು. ಅವರಿಗೆ ಟೆಸ್ಟ್‌ಕ್ಯಾಪ್‌ ಧರಿಸುವ ಅದೃಷ್ಟ ಕೂಡಿಬಂದಿತಾದರೂ ಕೆಲವೇ ನಿಮಿಷದಲ್ಲಿ ಗಾಯಾಳಾಗಿ ಮೈದಾನದಿಂದ ಹೊರನಡೆಯಬೇಕಾದ ಸಂಕಟಕ್ಕೆ ಸಿಲುಕಿದರು.

Advertisement

ಮೊಹಮ್ಮದ್‌ ಶಮಿ ಅವರಿಗೆ ವಿಶ್ರಾಂತಿ ನೀಡಿ ಶಾರ್ದೂಲ್  ಠಾಕೂರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅವರು ಉಮೇಶ್‌ ಯಾದವ್‌ ಜತೆ ಬೌಲಿಂಗ್‌ ಆರಂಭಿಸಿದರು. ಆದರೆ 10 ಎಸೆತ ಹಾಕುವಷ್ಟರಲ್ಲಿ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾದರು. ಫಿಸಿಯೋ ಪ್ಯಾಟ್ರಿಕ್‌ ಫ‌ರ್ಹಾತ್‌ ಆಗಮಿಸಿ ಪರೀಕ್ಷಿಸಿದರು. ಆದರೆ ಬೌಲಿಂಗ್‌ ಮುಂದುವರಿಸ ಲಾಗದ ಠಾಕೂರ್‌ ಅಂಗಳ ದಿಂದ ಹೊರನಡೆದರು. ಉಳಿದೆರಡು ಎಸೆತಗಳನ್ನು ಅಶ್ವಿ‌ನ್‌ ಎಸೆದು ಆ ಓವರ್‌ ಪೂರ್ತಿಗೊಳಿಸಿದರು. 

ಬಳಿಕ ಶಾರ್ದೂಲ್ ಠಾಕೂರ್‌ ಸ್ಕ್ಯಾನಿಂಗ್‌ಗೆ ತೆರಳಿದ ಕಾರಣ ಅಂಗಳಕ್ಕಿಳಿಯಲಿಲ್ಲ. ಇದರ ವರದಿ ಪರಿಶೀಲಿಸಿದ ಬಳಿಕ ಮುಂದಿನ ನಿರ್ಧಾರಕ್ಕೆ ಬರಲಾಗುವುದು ಎಂದು ತಂಡದ ಪ್ರಕಟನೆ ತಿಳಿಸಿದೆ. ಠಾಕೂರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ 294ನೇ ಆಟಗಾರನಾಗಿದ್ದರು. ಕಳೆದ ಏಶ್ಯ ಕಪ್‌ ಕೂಟದ ಹಾಂಕಾಂಗ್‌ ಎದುರಿನ ಪಂದ್ಯದ ವೇಳೆ ಅವರು ಇದೇ ಸಮಸ್ಯೆಗೆ ಸಿಲುಕಿದ್ದರು.

ಮರಳಿದ ಜಾಸನ್‌ ಹೋಲ್ಡರ್‌
ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಿಂದ ಕಡೆ ಗಳಿಗೆಯಲ್ಲಿ ಹೊರಗುಳಿದ ವೆಸ್ಟ್‌ ಇಂಡೀಸ್‌ ನಾಯಕ ಜಾಸನ್‌ ಹೋಲ್ಡರ್‌, ಹೈದರಾಬಾದ್‌ನಲ್ಲಿ ಕಣಕ್ಕಿಳಿದು ತಂಡದ ನೇತೃತ್ವ ವಹಿಸಿದರು. ಎಡಗೈ ಸ್ಪಿನ್ನರ್‌ ಜೋಮೆಲ್‌ ವ್ಯಾರಿಕ್ಯಾನ್‌ ಕೂಡ ಆಡುವ ಬಳಗಕ್ಕೆ ಸೇರ್ಪಡೆಗೊಂಡರು. ಇವರಿಗಾಗಿ ಜಾಗ ಬಿಟ್ಟವರು ಕೀಮೊ ಪೌಲ್‌ ಮತ್ತು ಶೆರ್ಮನ್‌ ಲೆವಿಸ್‌.

Advertisement

Udayavani is now on Telegram. Click here to join our channel and stay updated with the latest news.

Next