Advertisement

ಸುವರ್ಣರು ಶತಮಾನ ಕಂಡ ಶ್ರೇಷ್ಠ ಸಮಾಜ ಸುಧಾರಕ: ಉಮೇಶ್‌ ಶೆಟ್ಟಿ

07:46 PM Nov 02, 2020 | Suhan S |

ಥಾಣೆ, ನ. 1: ಅತ್ಯಂತ ಸರಳ ಹಾಗೂ ಸಾರ್ಥಕ ಜೀವನ ನಡೆಸಿ ಲಕ್ಷಾಂತರ ಮಂದಿಗೆ ಭವಿಷ್ಯ ಕಲ್ಪಿಪಿಸಿದ ಜಯ ಸುವರ್ಣರು ನಿಸ್ವಾಥ ಸೇವಾ ಮನೋಭಾವದ ಚಿಂತಕರು. ವಿವಿಧತೆಯಲ್ಲಿ ಏಕತೆ ಮೂಡಿಸಿ ಮಹಾರಾಷ್ಟ್ರಾದ್ಯಂತ ನೆಲಸಿದ ಬಿಲ್ಲವರನ್ನು ಒಂದೇ ಸೂರಿನಡಿ ಸಂಘಟಿಸಿದ ಕಾರ್ಯಚತುರರು. ಶತಮಾನ ಕಂಡ ಶ್ರೇಷ್ಠ ಸಮಾಜ ಸುಧಾರಕರು ಎಂದು ಥಾಣೆ ಹೋಟೆಲ್‌ ಓನರ್ಸ್‌ ಅಸೋಶಿಯೇಶನ್‌ನ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್‌ ಥಾಣೆ ಘಟಕದ ಮಾಜಿ ಅಧ್ಯಕ್ಷ ಪೊಲ್ಯ ಉಮೇಶ್‌ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

Advertisement

ಅ. 29ರಂದು ಬಿಲ್ಲವರ ಅಸೋಸಿಯೇಶನ್‌ ಥಾಣೆ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಾಜಿ ಅಧ್ಯಕ್ಷ, ಆಜೀವ ಗೌರವಾಧ್ಯಕ್ಷ, ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ನಿಕಟಪೂರ್ವ ಕಾರ್ಯಾಧ್ಯಕ್ಷ, ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣ ಅವರ ಶ್ರದ್ಧಾಂಜಲಿ ಸಭೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಪದವಿಗಳು ಇಲ್ಲದಿದ್ದರೂ ಅದಕ್ಕಿಂತ ಮಿಗಿಲಾದ ಮೇಧಾವಿ, ತತ್ವಜ್ಞಾನ, ಅರ್ಥಿಕ ತಜ್ಞತೆ ಅವರಲ್ಲಿತ್ತು. ಸಮಾಜಪರ ಚಿಂತನೆ, ತ್ಯಾಗಜೀವನದ ಮೂಲಕ ಜಯ ಸುವರ್ಣರು ಬಿಲ್ಲವ ಹಾಗೂ ಹಿಂದೂ ಸಮಾಜಕ್ಕೆ ಹೊಸ ಆಯಾಮ, ದಿಶೆಯ ಛಾಪು ಮೂಡಿಸಿದ್ದಾರೆ. ಅವರಂತಹ ಸಮಾಜ ಸೇವಕರು ಮತ್ತೆ ಹುಟ್ಟಿ ಬರಲಿ ಎಂದರು.

ಬಿಲ್ಲವರ ಅಸೋಶಿಯೇಶನ್‌ ಥಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್‌. ಎಸ್‌. ಪೂಜಾರಿ ಅವರು ಮಾತನಾಡಿ, ಕೇವಲ ಬಿಲ್ಲವ ಸಮಾಜಕ್ಕೆ ಸೀಮಿತವಾಗದೆ ವಿವಿಧ ಸಮಾಜದ ಶ್ರೆಯೋಭಿವೃದ್ಧಿಗಾಗಿ ಶ್ರಮಿಸಿದ ಜಯ ಸಿ.ಸುವರ್ಣರು ಅಪರೂಪದ ಅನರ್ಘ‌ ರತ್ನ. ಅವರು ಸಂಘಟನೆಗೆ ನೀಡಿದ ಸಹಕಾರವನ್ನು ನಾವೆಂದೂ ಮರೆಯುವಂತಿಲ್ಲ ಎಂದು ನುಡಿದರು.

ಬಿಲ್ಲವರ ಅಸೋಶಿಯೇಶನ್‌ ಮುಂಬಯಿ ಇದರ ಉಪಾಧ್ಯಕ್ಷ ದಯಾನಂದ ಆರ್‌. ಪೂಜಾರಿ ಅವರು ಮಾತನಾಡಿ, ಜಯ ಸುವರ್ಣರು ಬಿಲ್ಲವ ಸಮಾಜದ ಅಭಿವೃದ್ಧಿಯ ಹರಿಕಾರಕರು. ಬಿಲ್ಲವ ಭವನ ನಿರ್ಮಾಣ, ಕುದ್ರೋಳಿ ಗೋಕರ್ಣನಾಥೇಶ್ವರ, ಕಟಪಾಡಿ ವಿಶ್ವನಾಥ ಕ್ಷೇತ್ರ, ಪುತ್ತೂರು ಗೆಜ್ಜೆಗಿರಿ ಕ್ಷೇತ್ರ ಇವೆಲ್ಲ ಅವರ ಸಾಧನೆಯ ಪ್ರತಿಬಿಂಬವಾಗಿದೆ. ಇವೆಲ್ಲದರ ಅಭಿವೃದ್ಧಿಯಲ್ಲಿ ಜಯ ಸುವರ್ಣರ ಪಾತ್ರ ಮಹತ್ತರವಾದುದು. ಮುಖವಾಣಿ ಅಕ್ಷಯ ಪತ್ರಿಕೆಯನ್ನು ಎಲ್ಲರ ಮನೆ ಮನೆ ಮುಟ್ಟುವಂತೆ ಮಾಡಿದ್ದಾರೆ. ಗುರುನಾರಾಯಣ ಯಕ್ಷಗಾನ ಮಂಡಳಿಗೆ ಹೊಸ ಚೈತನ್ಯ ತಂಬಿದ್ದಾರೆ ಎಂದರು.

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಕಾರ್ಯದರ್ಶಿ ರವಿ ಹೆಗ್ಡೆ ಹೆರ್ಮುಂಡೆ, ನವೋದಯ ಕನ್ನಡ ಸೇವಾ ಸಂಘ ಇದರ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ, ಏಷ್ಯಾಟಿಕ್‌ ಕ್ರೇನ್‌ ಸರ್ವಿಸಸ್‌ನ ಗಣೇಶ್‌ ಆರ್‌. ಪೂಜಾರಿ, ಭಾರತ್‌ ಬ್ಯಾಂಕಿನ ಮಾಜಿ ನಿರ್ದೇಶಕ ಅಶೋಕ್‌ ಎಂ. ಕೋಟ್ಯಾನ್‌ ಅವರು ನುಡಿನಮನ ಸಲ್ಲಿಸಿದರು. ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ದೀಪಪ್ರಜ್ವಲಿಸಿ ಜಯ ಸುವರ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Advertisement

ಶ್ರದ್ಧಾಂಜಲಿ ಸಭೆಯಲ್ಲಿ ಭಾರತ್‌ ಬ್ಯಾಂಕ್‌ನ ನಿರ್ದೇಶಕ ಜ್ಯೋತಿ ಕೆ. ಸುವರ್ಣ, ಸಮಾಜ ಸೇವಕ ಸುಧಾಕರ ಅಜೆಕಾರ್‌, ಥಾಣೆ ಬಿಜೆಪಿ ಜಿಲ್ಲಾ ದಕ್ಷಿಣ ವಲಯ ಅಧ್ಯಕ್ಷ ಸುಕುಮಾರ್‌ ಶೆಟ್ಟಿ, ಕಾರ್ಯದರ್ಶಿ ಹರೀಶ್‌ ಉದ್ಯಾವರ, ಕುಲಾಲ ಸಂಘ ಥಾಣೆ ಇದರ ಶಂಕರ್‌ ಬಿ. ಮೊಲಿ, ಭಾರತ್‌ ಬ್ಯಾಂಕಿನ ಪ್ರಬಂಧಕರಾದ ಜನಾರ್ಧನ ಅಮೀನ್‌, ಚಿತ್ರಕಲಾ ಡಿ. ಸುವರ್ಣ, ಹೊಟೇಲ್‌ ಉದ್ಯಮಿ, ಸಮಾಜ ಸೇವಕರುಗಳಾದ ಬಾಲು ಎಲ್‌. ಸಾಲ್ಯಾನ್‌, ವಾಸು ಎಸ್‌. ಪೂಜಾರಿ, ವಿಶ್ವನಾಥ ಆರ್‌. ಪೂಜಾರಿ, ವಿನೋದ್‌ ಅಮೀನ್‌, ರವಿ ಆರ್‌. ಕೋಟ್ಯಾನ್‌, ಹಿರಿಯ ಸಮಾಜ ಸೇವಕ ಜಗನ್ನಾಥ ಅಮೀನ್‌ ಮುಲುಂಡ್‌, ಥಾಣೆ ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ, ಕೋಶಾಧಿಕಾರಿ ದೇವದಾಸ್‌ ಎಸ್‌. ಕರ್ಕೇರ, ಸಮಿತಿ ಸದಸ್ಯರಾದ ಲಕ್ಷ್ಮಣ್‌ ಕೆ. ಅಮೀನ್‌, ಪೂರ್ಣಿಮಾ ಎನ್‌. ಅಮೀನ್‌, ತ್ರಿವೇಣಿ ಬಿ. ಪೂಜಾರಿ, ಎಂ. ಜಿ. ಸಾಲ್ಯಾನ್‌, ಜಗನ್ನಾಥ್‌ ಎಸ್‌. ಕೋಟ್ಯಾನ್‌, ಪ್ರೇಮಾನಂದ ಕುಕ್ಯಾನ್‌, ಜಯರಾಮ್‌ ಟಿ. ಸಾಲ್ಯಾನ್‌, ಗಿರಿಧರ ಕರ್ಕೇರ, ರವೀಂದ್ರ ಎಸ್‌. ಪೂಜಾರಿ, ರಾಕೇಶ್‌ ಕರ್ಕೆರ, ಕೃಷ್ಣ ಪೂಜಾರಿ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು. ಯುವ ವಿಭಾಗ, ಭಜನ ಮಂಡಳಿಯ ಸದಸ್ಯರು ಅಲ್ಲದೆ ಜಯ ಸುವರ್ಣರ ಅಭಿಮಾನಿಗಳು ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.

ಜಯ ಸುವರ್ಣರು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮಭಕ್ತ. ಅವರ ತತ್ವ ಸಂದೇಶವನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜಪರ ಸೇವೆಗೈದ ಮಹಾನ್‌ ಜನ ನಾಯಕ. ಬಿಲ್ಲವ ಭವನ ನಿರ್ಮಾಣ, ಸಮಾಜದ ಸಂಘಟನೆ ಬಲಪಡಿಸಲು 23 ಸ್ಥಳೀಯ ಕಚೇರಿಗಳ ಸ್ಥಾಪನೆ, ಭಾರತ್‌ ಬ್ಯಾಂಕನ್ನು ಅಭಿವೃದ್ಧಿಪಡಿಸಿ ಅದನ್ನು ಮಹಾರಾಷ್ಟ್ರ ಅಲ್ಲದೆ ಕರ್ನಾಟಕ, ಗುಜರಾತ್‌ ರಾಜ್ಯಕ್ಕೆ ವಿಸ್ತರಿಸಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದರು. ಸಮಾಜಕ್ಕೆ ಒಬಿಸಿ ಸೌಲಭ್ಯ ಮಾಡಿದರು. ಸಮಾಜವನ್ನು ಪ್ರಗತಿಪಥದತ್ತ ಕೊಂಡೊಯ್ದು ಇತಿಹಾಸದ ಪುಟ ಸೇರಿದ ಜಯ ಸುವರ್ಣರ ನಿಸ್ವಾರ್ಥ ಬದುಕು ಸಾರ್ವಕಾಲಿಕ ಸತ್ಯ -ಡಿ. ಅನಂತ್‌ ಸಾಲ್ಯಾನ್‌, ಗೌರವ ಕಾರ್ಯಾಧ್ಯಕ್ಷ, ಬಿಲ್ಲವರ ಅಸೋಸಿಯೇಶನ್‌ ಥಾಣೆ ಸ್ಥಳೀಯ ಸಮಿತಿ

ಗುರುಗಳ ತತ್ವ, ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದ ಜಯ ಸಿ. ಸುವರ್ಣರು ಎಲ್ಲ ಸಮಾಜದ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ಜಯ ಸುವರ್ಣರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಅವರು ಮಾದರಿ ಸಮಾಜ ಸೇವಕ. ಪರೋಪಕಾರ, ದಾನ, ಧರ್ಮದ ಮುಖಾಂತರ ಎಲ್ಲರ ಹೃದಯವನ್ನು ಗೆದ್ದು ಸಮಾಜ ಸೇವೆಯನ್ನು ಮಾಡಿರುವ ಜಯ ಸುವರ್ಣರಂತಹ ವ್ಯಕ್ತಿ ಸಮಾಜದಲ್ಲಿ ನಮಗೆ ಎಂದಿಗೂ ಸಿಗಲು ಸಾಧ್ಯವಿಲ್ಲ. -ಚಂದ್ರಶೇಖರ ಎಸ್‌. ಪೂಜಾರಿ, ಅಧ್ಯಕ್ಷ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

ಜಯ ಸುವರ್ಣರ ಮಾರ್ಗದರ್ಶನದಲ್ಲಿ ನಾನು ಭಾರತ್‌ ಬ್ಯಾಂಕಿನ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ಅಭಿಮಾನವಿದೆ. ಸಾವಿರಾರು ಮಂದಿ ಸಮಾಜ ಸೇವಕರನ್ನು ಜಯ ಸುವರ್ಣರು ತಯಾರು ಮಾಡಿದ್ದಾರೆ. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವೆಲ್ಲರೂ ಸಮಾಜದ ಏಳ್ಗೆಗಾಗಿ ಕೆಲಸ ಮಾಡೋಣ. ಅವರ ಯೋಜನೆ, ಯೋಚನೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸೋಣ. ಇದುವೇ ನಾವು ಅವರಿಗೆ ಸಲ್ಲಿಸುವ ಬಹುದೊಡ್ಡ ಶ್ರದ್ಧಾಂಜಲಿಯಾಗಿದೆ. -ಅಶೋಕ್‌ ಎಂ. ಕೋಟ್ಯಾನ್‌, ಮಾಜಿ ನಿರ್ದೇಶಕರು, ಭಾರತ್‌ ಬ್ಯಾಂಕ್‌

Advertisement

Udayavani is now on Telegram. Click here to join our channel and stay updated with the latest news.

Next