Advertisement

ಲಾಠಿ ಪ್ರಹಾರದಿಂದ ಕೋವಿಡ್ ಹೋಗಲ್ಲ, ಬೆಡ್, ಆಕ್ಸಿಜನ್ ನೀಡಿ : ಸಿಎಂ ವಿರುದ್ಧ ಶರವಣ ಕಿಡಿ

02:11 PM Apr 23, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ಜೊತೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಅಲ್ಲದೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ರಾಜ್ಯದಲ್ಲಿ ಎಲ್ಲವನ್ನೂ ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್ ಬುಕ್ ನಲ್ಲಿ ಸಿಎಂ ವಿರುದ್ಧ ಹರಿ ಹಾಯ್ದಿದ್ದಾರೆ.

Advertisement

ಮಾನ್ಯ  ಯಡಿಯೂರಪ್ಪ ನವರೇ ಕೊರೋನಾ ಹತೋಟಿಗೆ ತರಲು  ಸರ್ಕಾರ  ವಿಫಲವಾದ ನಂತರ  ಜನರ ಮೇಲೆ  ಲಾಠಿ  ಪ್ರಹಾರ  ಮಾಡಿ ವಿನಾ: ಕಾರಣ ಗಲಾಟೆ ಮಾಡಿ  ಪೋಲಿಸ್ ಅಧಿಕಾರಿಗಳು  ಜನಸಾಮಾನ್ಯರಿಗೆ  ಕೊಡುತ್ತಿರವ ಕಿರುಕುಳ ಅಷ್ಟಿಷ್ಟಲ್ಲ.

ಇದರಿಂದ ಕೊರೋನಾ  ಹೋಗೋಲ್ಲಾ . ಬಡಜನರಿಗೆ  ಬೇಕಾದ  ಆಸ್ಪತ್ರೆಯಲ್ಲಿ   ಬೆಡ್, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಆಂಬ್ಯುಲೆನ್ಸ್, ಚಿತಾಗಾರ, ಸ್ಮಶಾನ, ರೆಮಿಡಿಸವೇರ್ ಇಂಜೆಕ್ಷನ್, ವ್ಯಾಕ್ಸಿನ್  ಇವುಗಳನ್ನು  ಸರಿಯಾದ  ಸಮಯದಲ್ಲಿ  ಒದಗಿಸದೇ  ಬೀದಿ  ಬೀದಿಯಲ್ಲಿ  ಜನರಿಗೆ  ಲಾಠಿ ಪ್ರಹಾರ    ಸರಿಯಲ್ಲ.  ಮಾಸ್ಕ್  ಸರ್ಕಾರದಿಂದ  ಉಚಿತವಾಗಿ  ನೀಡಿ. ಕೂಡಲೇ  ಜನರ ಪ್ರಾಣ ಉಳಿಸಲು  ಪ್ರಾಮಾಣಿಕ  ಪ್ರಯತ್ನ  ಮಾಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next