ಹೊಸದಿಲ್ಲಿ: ಖ್ಯಾತ ಆಟಗಾರರಾದ ಶರತ್ ಕಮಲ್ ಮತ್ತು ವಿಶ್ವದ 24ನೇ ರ್‍ಯಾಂಕಿನ ಮಣಿಕಾ ಬಾತ್ರ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಮತ್ತು ವನಿತೆಯರ ತಂಡಗಳ ನೇತೃತ್ವ ವಹಿಸಲಿದ್ದಾರೆ. ಟೇಬಲ್ ಟೆನಿಸ್‌ನ ತಂಡ ವಿಭಾಗದಲ್ಲಿ ಭಾರತ ಮೊದಲ ಬಾರಿ ಸ್ಪರ್ಧಿಸುತ್ತಿದೆ.
ಒಲಿಂಪಿಕ್ ಅರ್ಹತೆಯ ಆಧಾರದಲ್ಲಿ ಆರು ಸದಸ್ಯರ ತಂಡವನ್ನು ಭಾರತೀಯ ಟೇಬಲ್ ಟೆನಿಸ್ ಫೆಡರೇಶನ್‌ನ ಹಿರಿಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಪುರುಷರ ತಂಡದಲ್ಲಿ ಶರತ್ ಅವರಲ್ಲದೇ ಹರ್ಮಿàತ್ ದೇಸಾಯಿ ಮತ್ತು ಮಾನವ್ ಥಕ್ಕರ್ ಇದ್ದರೆ ವನಿತೆಯರ ತಂಡದಲ್ಲಿ ಮಣಿಕಾ, ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಇದ್ದಾರೆ. ಈ ಎರಡು ವಿಭಾಗದಲ್ಲಿ ಬದಲಿ ಆಟಗಾರರಾಗಿ ಜಿ. ಸಥಿಯನ್ ಮತ್ತು ಐಹಿಕಾ ಮುಖರ್ಜಿ ಅವರನ್ನು ನೇಮಿಸಲಾಗಿದೆ.
ಸಿಂಗಲ್ಸ್ ಸ್ಪರ್ಧೆಯಲ್ಲಿ ಶರತ್ ಮತ್ತು ಹರ್ಮೀತ್ ಸ್ಪರ್ಧಿಸಲಿದ್ದರೆ ವನಿತೆಯರ ವಿಭಾಗದಲ್ಲಿ ಮಣಿಕಾ ಮತ್ತು ಶ್ರೀಜಾ ಇದ್ದಾರೆ. ನೂತನ ವಿಶ್ವ ರ್‍ಯಾಂಕಿಂಗ್‌ನ ಆಧಾರದಲ್ಲಿ ಆಟಗಾರರ ಆಯ್ಕೆ ನಡೆದಿದೆ.