Advertisement

ಸರ್ಕಾರಿಯೋಜನೆ ಸದ್ಬಳಕೆಯಾಗಲಿ ! ಶಾಸಕ ಶರತ್‌ ಬಚ್ಚೇಗೌಡ ಅಭಿಮತ

04:12 PM Oct 15, 2020 | sudhir |

ಅನಗೊಂಡನಹಳ್ಳಿ: ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಲಭ್ಯ ವಾಗಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಆಯು ಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತಂದಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು. ನಂದಗುಡಿ ಹೋಬಳಿಯ ಬೈಲನರಸಾ ಪುರ ಗ್ರಾಪಂ ವ್ಯಾಪ್ತಿಯ ಚಿಕ್ಕಕೊರಟಿ ಗ್ರಾಮದಲ್ಲಿ ಬುಧವಾರ ಹಿಂದುಳಿದ ವರ್ಗದ ಬಡ
150ಕುಟುಂಬಕ್ಕೆಉಚಿತವಾಗಿಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ವಿತರಿಸಿ ಮಾತನಾಡಿದರು.

Advertisement

ಸರ್ಕಾರಿ ಅಥವಾ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಾರ್ಷಿಕ ಪ್ರತಿ ಕುಟುಂಬ 5 ಲಕ್ಷ ರೂ. ವಿಮೆ ಪಡೆಯಬಹುದಾಗಿದೆ. ಗ್ರಾಮೀಣಾ ಪ್ರದೇಶದ ಜನರು ಅಯುಷ್ಮಾನ್‌ ಕಾರ್ಡ್‌ ಪಡೆಯಲು ತಾಲೂಕುಕೇಂದ್ರಗಳಿಗೆ ತಿಂಗಳು ಗಟ್ಟಲೆ ಅಲೆದಾಡಬೇಕಾಗಿತ್ತು. ಆದರೆ ಪ್ರತಿ ಕುಟುಂಬಕ್ಕೂ ಯಾವುದೇ ಶುಲ್ಕಪಡೆಯದೆ ಉಚಿತವಾಗಿ ಕಾರ್ಡ್‌ಗಳನ್ನು ಸಿದ್ಧಪಡಿಸಿ ವಿತರಣೆ ಮಾಡಲಾಗುತ್ತಿದೆ ಎಂದರು.

ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬ ಸದಸ್ಯರು ಸದ್ಭಳಕೆ ಮಾಡಿಕೊಂಡು ಸದೃಢ ಆರೋಗ್ಯ ಹೊಂದಬೇಕು. ಈ ಭಾಗದಲ್ಲಿ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಾಗ ಸ್ವಂತ ಹಣದಲ್ಲಿ ಪ್ರತಿಯೊಂದುಕುಟುಂಬಕ್ಕೂ ರ್‍ಯಾಂಡಮ್‌ ಪರೀಕ್ಷೆ ಮಾಡಿಸಲಾಯಿತು.

ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ನಲ್ಲಿ ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಿದ್ದು, ತ್ವರಿತವಾಗಿ ನೂತನ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು. ಈ ವೇಳೆ ಮಾಜಿ ತಾಪಂ ಅಧ್ಯಕ್ಷ ಬಿ.ವಿ. ರಾಜಶೇಖರಗೌಡ, ಮಂಜುನಾಥ ಗೌಡ,
ಭಾರತೀಯ ರೈಲ್ವೆ ಮಂಡಳಿ ಸದಸ್ಯ ಬಿ. ಗೋಪಾಲ…, ನೆಲವಾಗಿಲು ಎಸ್‌ಎಫ್ಸಿಎಸ್‌ ಅಧ್ಯಕ್ಷ ಶ್ರೀನಿವಾಸ್‌, ತಾಪಂ ಸದಸ್ಯ ಮನ್ಸೂರ್‌ ಆಲಿಖಾನ್‌, ಪಿಎಲ್ಡಿ ಬ್ಯಾಂಕ್‌ ಸದಸ್ಯ ನಾರಾಯಣಸ್ವಾಮಿ, ಯುವ ಮುಖಂಡ ಗುರು, ಮಾಜಿಮಂಡಲ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್‌, ಮಾಜಿ ಗ್ರಾಪಂ ಸದಸ್ಯ ಪಿಳ್ಳಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next