Advertisement

ಬಿಎಸ್ ವೈ ಎದುರು ಶರತ್ ಬಚ್ಚೇಗೌಡಗೆ ಮುಖಭಂಗ: ಪ್ರಮಾಣವಚನ ಕಾರ್ಯಕ್ರಮದಲ್ಲಿ ಆಗಿದ್ದೇನು?

10:01 AM Dec 23, 2019 | keerthan |

ಬೆಂಗಳೂರು: ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡಗೆ ಮುಖಭಂಗವಾದ ಘಟನೆ ನಡೆದಿದೆ.

Advertisement

ರವಿವಾರ ಬೆಳಿಗ್ಗೆ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿಜೆಪಿ ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಮಾತನಾಡಲು ಪ್ರಯತ್ನ ಪಟ್ಟು ವಿಫಲರಾದರು.

ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಯಡಿಯೂರಪ್ಪ ಜೊತೆ ಶರತ್ ಮಾತನಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರನ್ನು ಕರೆದರೂ ಅವರು ತಿರುಗಿಯೂ ನೋಡದೇ ಹೋಗಿದ್ದು ಶರತ್ ಬಚ್ಚೇಗೌಡರಿಗೆ ಮುಖಭಂಗವಾಯಿತು ಎಂದು ವರದಿಯಾಗಿದೆ.

ಅಷ್ಟೇ ಅಲ್ಲದೆ ಬಿಜೆಪಿ ಶಾಸಕರು ಗ್ರೂಫ್ ಫೋಟೊ ತೆಗೆಯುವಾಗ ಮೊದಲು ಶರತ್ ಫೋಟೋಗೆ ಬರಲು ನಿರಾಕರಿಸಿದರು ಎನ್ನಲಾಗಿದೆ. ನಂತರ ಒಲ್ಲದ ಮನಸ್ಸಿನಿಂದಲೇ ಗ್ರೂಪ್ ಫೋಟೋಗೆ ಶರತ್ ಪೋಸ್ ಕೊಟ್ಟರು.

15 ನೂತನ ಶಾಸಕರ ಪೈಕಿ ಇಂದು 13 ಮಂದಿ ಮಾತ್ರ ಸಮಾರಂಭದಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ನ ಮಂಜುನಾಥ್ ಮತ್ತು ರಿಜ್ವಾನ್ ಅರ್ಷದ್ ಗೈರಾದರು.

Advertisement

ಬಿಜೆಪಿಯಲ್ಲಿದ್ದ ಶರತ್ ಬಚ್ಚೇಗೌಡ ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ನೀಡದ ಹಿನ್ನಲೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next