Advertisement
ಮಂಗಳೂರಿಂದ ಹೊರಟ ಅಂತಿಮಯಾತ್ರೆ ಮೆರವಣಿಗೆ ಸಂದರ್ಭ ರಾ. ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ನಿಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.
ಮೃತ ದೇಹಕ್ಕೆ ಅಂತಿಮ ನಮನ ಸಲ್ಲಿಸುವಾಗ ಎಲ್ಲರೂ ಎದ್ದುನಿಂತು ರಾ.ಸ್ವ.ಸೇ. ಸಂಘದ ಪ್ರಾರ್ಥನಾ ಕ್ರಮದಲ್ಲಿ ನಮಸ್ತೆ ಸದಾವತ್ಸಲೇ ಮಾತೃಭೂಮಿ…ಪ್ರಾರ್ಥನೆಯನ್ನು ಸಾಮೂಹಿಕವಾಗಿ ಹೇಳಿ ಪ್ರಣಾಮ ಸಲ್ಲಿಸಿ ಭಾರತ ಮಾತಾಕೀ ಜೈ ಘೋಷಣೆ ಮಾಡಿದರು.
Related Articles
Advertisement
ಅಪಾರ ಸಂಖ್ಯೆಯಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಮತ್ತು ಪಶ್ಚಿಮವಲಯ ಐಜಿಪಿ ಹರಿಶೇಖರನ್ ಮತ್ತು ಹಿರಿಯ ಪೊಲೀಸ್‌ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಂದೋ ಬಸ್ತ್ ಮಾಡಲಾಗಿತ್ತು. ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ರಾಷ್ಟಿÅàಯ ಹೆದ್ದಾರಿ ಮೆಲ್ಕಾರ್ ಮತ್ತು ಬಿ.ಸಿ.ರೋಡ್ ಮುಖ್ಯವೃತ್ತದಲ್ಲಿ ಪೊಲೀಸರೇ ಬದಲಿ ರಸ್ತೆಯಲ್ಲಿ ಹೋಗುವಂತೆ ಸೂಚನೆ ನೀಡುವ ಮೂಲಕ ಸಂಚಾರದ ಒತ್ತಡ ಕಡಿಮೆ ಮಾಡುವಂತೆ ಕ್ರಮ ಕೈಗೊಂಡರು.
ರಾ. ಸ್ವ. ಸೇ. ಸಂಘದ ಪ್ರಮುಖರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮೃತರ ಮನೆಗೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು. ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ನಿಮ್ಮ ಜತೆ ನಾವಿದ್ದೇವೆ. ಯಾವುದೇ ಕಾಲಕ್ಕೂ ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ಮೃತನ ತಂದೆ, ತಾಯಿ, ಕುಟುಂಬಕ್ಕೆ ಧೈರ್ಯ ತುಂಬಿದರು.
ಮೆರವಣಿಗೆ ಸಂದರ್ಭ ಪ್ರಮುಖರಾದ ಡಾ| ಕಮಲಾ ಪ್ರ. ಭಟ್, ಕೆ. ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಸುಲೋಚನಾ ಜಿ.ಕೆ. ಭಟ್, ಕೆ.ಪಿ. ಜಗದೀಶ ಅಧಿಕಾರಿ, ಕ್ಯಾ| ಗಣೇಶ್ ಕಾರ್ಣಿಕ್, ಜಗದೀಶ ಶೇಣವ, ಜಿತೇಂದ್ರ ಎಸ್. ಕೊಟ್ಟಾರಿ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ಎಂ .ತುಂಗಪ್ಪ ಬಂಗೇರ,ದಿನೇಶ ಅಮೂrರು, ಚೆನ್ನಪ್ಪ ಕೋಟ್ಯಾನ್, ಹರೀಶ್ ಪೂಂಜ, ಸಂತೋಷ್ ಕುಮಾರ್ ರೈ ಬೋಳಿಯಾರ್, ಶರಣ್ ಪಂಪ್‌ವೆಲ್, ಸತ್ಯಜಿತ್ ಸುರತ್ಕಲ್, ದಿನೇಶ್ ಭಂಡಾರಿ, ಸಂಜೀವ ಮಠಂದೂರು, ಬಿ. ದೇವದಾಸ ಶೆಟ್ಟಿ, ಜಿ. ಆನಂದ, ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ವಜ್ರನಾಥ ಕಲ್ಲಡ್ಕ, ಮುರಲಿಕೃಷ್ಣ ಹಸಂತಡ್ಕ ಮತ್ತು ಅನೇಕರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.
ತಾಳ್ಮೆಯಿಂದ ವರ್ತಿಸಿರಾಷ್ಟ್ರೀಯ ಸ್ವಯಂ ಸೇವಕನಾಗಿ ಮೃತ ಶರತ್ ತನ್ನನ್ನು ನಿಸ್ವಾರ್ಥದಿಂದ ತೊಡಗಿಸಿಕೊಂಡಿದ್ದ, ಒಳ್ಳೆಯ ಕಾರ್ಯಕರ್ತನನ್ನು ನಾವು ಕಳೆದುಕೊಂಡಿದ್ದೇವೆ. ಅವನಂಥವರು ಸಹಸ್ರಾರು ಸಂಖ್ಯೆಯಲ್ಲಿ ತಯಾರಾಗಬೇಕು. ಇಂತಹ ದುರ್ಘಟನೆಯ ಸಂದರ್ಭದಲ್ಲಿ ನಾವು ತಾಳ್ಮೆಯಿಂದ ವರ್ತಿಸಬೇಕು. ಅಶಾಂತಿ ಸೃಷ್ಟಿಗೆ ಅವಕಾಶ ನೀಡಬಾರದು. ಸಹನೆಯಿಂದ ವರ್ತಿಸಿ, ಗೊಂದಲ ಸೃಷ್ಟಿಯಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಸಂಘಟಿತವಾಗಿ ಮುನ್ನಡೆಯಬೇಕು. ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಿ. ನ. ಸೀತಾರಾಮ, ಆರ್‌ಎಸ್‌ಎಸ್ ವಿಭಾಗ ಕಾರ್ಯವಾಹ
ಅಮಾನವೀಯ ಸಂಸ್ಕೃತಿ ನಾವು ಒಂದು ಸಂದಿಗ್ಧ ಕಾಲಘಟ್ಟದಲ್ಲಿ ಇದ್ದೇವೆ. ನಮ್ಮೊಬ್ಬ ಬಂಧುವನ್ನು ಅಕಾಲಿಕವಾಗಿ ಅಗಲಿದ್ದೇವೆ. ಇಡೀಯ ಸಮಾಜಕ್ಕೆ ಹತ್ಯೆಯಂತಹ ಕೃತ್ಯವೇ ಅಮಾನವೀಯ. ಒಬ್ಬ ಸನ್ಯಾಸಿಯಾದ ನನ್ನ ಕಾರಿಗೆ ಕೂಡ ಬಿ.ಸಿ.ರೋಡ್ ಕೈಕಂಬದಲ್ಲಿ ಕಲ್ಲು ಎಸೆಯುವಂತಹ ಮಟ್ಟಕ್ಕೆ ಇಲ್ಲಿನ ಜನರು ತಲುಪಿ, ತಮ್ಮ ಅಮಾನವೀಯ ಸಂಸ್ಕೃತಿಯನ್ನು ತೋರಿಸಿದ್ದಾರೆ. ಏನು ನಡೆಯುತ್ತಿದೆ ಇಲ್ಲಿ. ಪೊಲೀಸರು ಯಾರಿಗೆ ರಕ್ಷಣೆ ನೀಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಶ್ರೀ ರಾಜಶೇಖರಾನಂದ ಸ್ವಾಮಿ, ಗುರುಪುರ ವಜ್ರದೇಹಿ ಮಠ ಶರತ್ ನಮ್ಮ ಸಮಾಜದಲ್ಲಿ ಹುಟ್ಟಿದ ಅತ್ಯುತ್ತಮ ಗುಣವಂತನಾದ ಹುಡುಗ, ಅವನಲ್ಲಿ ಯಾವುದೇ ಜಾತಿ ಧರ್ಮದವರು ಸಹಾಯ ಸಹಕಾರ ಕೇಳಿದರೂ ಇಲ್ಲವೆನ್ನದೆ ಸ್ಪಂದಿಸುತ್ತಿದ್ದ. ಎನ್.ಕೆ. ಶಿವ, ಅಧ್ಯಕ್ಷ ಬಂಟ್ವಾಳ ತಾಲೂಕು ಮಡಿವಾಳರ ಸಮಾಜ ಸಂಘ.