Advertisement
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕೋವ್ಯಾಕ್ಸಿನ್ ಲಸಿಕೆ ವಿತರಣಾ ಅಭಿಯಾನಕ್ಕೆ ನನಗೆ ಆಹ್ವಾನವಿಲ್ಲ. ಇದನ್ನು ತಾಲೂಕು ವೈದ್ಯಾಧಿಕಾರಿಡಾ| ಪ್ರಶಾಂತ ತುಂಬಗಿ ಅವರನ್ನು ಪ್ರಶ್ನಿಸಿದರೆ ಅದು ನನಗೆ ಗೊತ್ತಿಲ್ಲ. ಕಾರ್ಯಕ್ರಮದ ಎಲ್ಲ ಅತಿಥಿಗಳನ್ನು ಆಹ್ವಾನಿಸಿದ್ದು ತಹಶೀಲ್ದಾರ್ ಅವರನ್ನೇ ಕೇಳಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ತಹಶೀಲ್ದಾರ್ ಗೆ ಕರೆ ಮಾಡಿದರೇ ಕರೆ ಸ್ವೀಕರಿಸಲಿಲ್ಲ. ಮತ್ತೂಮ್ಮೆ ಕರೆ ಮಾಡಿದರೇ ಪೋನ್ ಬಂದ್ ಮಾಡಿರುವುದು ಕಂಡುಬಂದಿದೆ. ತಹಶೀಲ್ದಾರ್ ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆಯ ಅಧಿ ಕಾರಿಗಳು ಕಾರ್ಯಕ್ರಮದ ಶಿಷ್ಟಾಚಾರ ಮರೆತು ಬಿಜೆಪಿ ಪಕ್ಷದ ಶಾಸಕರ ಮಾತಿನಂತೆ ಅವರ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.