Advertisement

ಮನೆ ಮಹಾಮನೆ ಆಗಬೇಕೆಂಬುದೇ ಶರಣರ ಆಶಯ

06:01 PM May 13, 2022 | Team Udayavani |

ನರಗುಂದ: ಸಾತ್ವಿಕ ಬದುಕಿಗೆ ಶರಣರ ಸಂದೇಶಗಳು ಸನ್ಮಾರ್ಗ ತೋರಿಸಿವೆ. ಮನೆ ಮಹಾಮನೆ ಆಗಬೇಕೆಂಬುದು 12ನೇ ಶತಮಾನದ ಬಸವಾದಿ ಶರಣರ ಆಶಯವಾಗಿತ್ತು ಎಂದು ಶಿರೋಳ-ಚಿಂಚಣಿ ತೋಂಟದಾರ್ಯ ಮಠದ ಶ್ರೀ ಗುರುಬಸವ ಸ್ವಾಮಿಗಳು ಹೇಳಿದರು.

Advertisement

ಗುರುವಾರ ಮತಕ್ಷೇತ್ರದ ರೋಣ ತಾಲೂಕಿನ ಭೋಪಳಾಪೂರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಲಿಮಠ ಬಂಧುಗಳ ನೂತನ ಮನೆ ಗೃಹ ಪ್ರವೇಶ ಹಾಗೂ ವಿಶ್ರಾಂತ ಡಯಟ್‌ ಉಪನ್ಯಾಸಕ ವೀರಯ್ಯ ಸಾಲಿಮಠ ಅವರ 83ನೇ ವರ್ಷದ ಜನ್ಮದಿನದ ಸಹಸ್ರ ಚಂದ್ರದರ್ಶನ ಅಂಗವಾಗಿ ರೈತ ವಿಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಣ್ಣಿಗೇರಿಯ ಅಬ್ದುಲ್‌ಖಾದರಸಾಬ ನಡಕಟ್ಟಿನ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡಿ, ಮಕ್ಕಳು ಯೋಗ್ಯರಾಗಿ ಬೆಳೆದರೆ ಯಾವ ಸಂಪತ್ತಿನ ಆಶ್ರಯವೂ ಬೇಕಾಗಿಲ್ಲ. ತಂದೆ-ತಾಯಿ ವೃದ್ಧಾಶ್ರಮಕ್ಕೆ ಸೇರಿಸುವ ಇಂದಿನ ದಿನಗಳಲ್ಲಿ ತಂದೆಯ ಸಹಸ್ರ ಚಂದ್ರದರ್ಶನ ಏರ್ಪಡಿಸಿದ್ದು ಸ್ತುತ್ಯಾರ್ಹ. ಜಗತ್ತಿನ ಎಲ್ಲ ದೇವರನ್ನು ನೋಡುವ ಭಾಗ್ಯ ಕರುಣಿಸಿದ ತಂದೆ-ತಾಯಿ ಸೇವೆ ಸ್ಮರಿಸಬೇಕು ಎಂದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಭೋಪಳಾಪುರ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗೀಗಿ ಪದಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದ ಈ ಗ್ರಾಮ ತನ್ನದೇ ಕೊಡುಗೆ ನೀಡಿದೆ. ನಡಕಟ್ಟಿನ ಅವರ ಎಲ್ಲ ಸಂಶೋಧನೆಗಳಿಗೆ ಪ್ರೋತ್ಸಾಹ ತುಂಬಿದವರು ಗದುಗಿನ ಲಿಂ. ತೋಂಟದ ಶ್ರೀಗಳು ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ರೈತ ವಿಜ್ಞಾನಿ, ಕೃಷಿ ಸಂಶೋಧಕರಾದ ಪದ್ಮಶ್ರೀ ಪುರಸ್ಕೃತ ಅಬ್ದುಲ್‌ಖಾದರಸಾಬ ನಡಕಟ್ಟಿನ ಹಾಗೂ ಪತ್ನಿ ವಲೀಮಾ ಅವರನ್ನು ಗ್ರಾಮಸ್ಥರ ಪರವಾಗಿ ಪೂಜ್ಯರು ಸತ್ಕರಿಸಿದರು.

Advertisement

ಈ ವೇಳೆ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತೇಶ್ವರ ಸ್ವಾಮಿಗಳು, ವೀರಯ್ಯ ಸಾಲಿಮಠ ದಂಪತಿಗಳು, ಶಿವಮೊಗ್ಗ ಸಹಾಯಕ ಔಷಧ ನಿಯಂತ್ರಣಾ  ಧಿಕಾರಿ ಡಾ| ವೀರೇಶಬಾಬು, ವೈದ್ಯ ಡಾ| ಎ.ಐ. ಹುಯಿಲಗೋಳ, ನಿಜಲಿಂಗಪ್ಪ ಸಣ್ಣಕ್ಕಿ, ವಿ.ಎಸ್‌. ಹಿರೇಮಠ, ಕಲ್ಲಯ್ಯ ಕಲ್ಲೂರ, ಬಿ.ಬಿ. ಹಿರೇಗೌಡ್ರ, ಬಸಲಿಂಗಯ್ಯ ಇಂಗಳಳ್ಳಿಮಠ, ಚಂದ್ರಗೌಡ ಪಾಟೀಲ, ಲಿಂಗಬಸಪ್ಪ ಮರ್ಚನ್ನವರ, ಪುನೀತಪ್ಪ ಸಾಂಭ್ರಾಣಿ, ವಿ.ಎಸ್‌. ಹಿರೇಮಠ ಇದ್ದರು.
ಮಹಾಂತೇಶ ಸಾಲಿಮಠ ಸ್ವಾಗತಿಸಿದರು. ಪ್ರಾಚಾರ್ಯ ಬಿ.ಎಸ್‌. ಸಾಲಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next