Advertisement

Navaratri: ಶರನ್ನವರಾತ್ರಿ ಮತ್ತು ಶ್ರೀ ಚಕ್ರಾರಾಧನೆ

01:58 PM Oct 04, 2024 | Team Udayavani |

ಶರನ್ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ಚಕ್ರ ಆರಾಧನೆಗೆ ಅತ್ಯಂತ ಮಹತ್ವ ವಿದೆ. ಶ್ರೀಚಕ್ರ ಪೂಜೆ ದೇವಿಯನ್ನು ಆರಾಧಿಸುವ ವಿಶಿಷ್ಟ ಪೂಜೆಯಾಗಿದ್ದು, ಶ್ರೀ ಚಕ್ರ ಯಂತ್ರವು ರೇಖಾ ರೂಪದಲ್ಲಿ ದೇವಿಯನ್ನು ಆರಾಧಿಸುವ ಒಂದು ಸಾಧನ. ಶಕ್ತಿ ಮಾತೆಯಾದ ದೇವಿಯ ಚಿಹ್ನೆ ಶ್ರೀಚಕ್ರ. ಹೀಗಾಗಿಯೇ ನವರಾತ್ರಿ ವೇಳೆ ಶ್ರೀ ಚಕ್ರ ಪೂಜೆ ಅಥವಾ ಆರಾಧನೆಗೆ ವಿಶೇಷ ಪ್ರಾಧಾನ್ಯ, ಮನ್ನಣೆ.

Advertisement

ಆದ್ಯ ಶಂಕರಾಚಾರ್ಯರ ಅದ್ವೈತ ತಣ್ತೀಸಾರದ ಆರಾಧನಾ ಪದ್ಧತಿಗಳಲ್ಲಿ ಶಾಕ್ತಮತದ ಅತ್ಯುನ್ನತ ವಿಧಾನವಾದ ಶ್ರೀಚಕ್ರ ಉಪಾಸನೆಗೆ ವಿಶೇಷವಾದ ಸ್ಥಾನವಿದೆ. ಶ್ರೀ ಶಂಕರಾಚಾರ್ಯರು ನಿರ್ಮಿಸಿದ ಚತುರಾಮ್ನಾಯ ಮಠ ಗಳಲ್ಲಿ ಅಲ್ಲದೆ ಅನ್ಯತ್ರ ಕ್ಷೇತ್ರಗಳಲ್ಲಿ ಎಲ್ಲಡೆ ಶ್ರೀಚಕ್ರದ ಉಲ್ಲೇಖ -ಆರಾಧನೆ ಒಂದಲ್ಲ ಒಂದು ರೀತಿಯಿಂದ ಕಂಡು ಬಂದಿದೆ. ಅರ್ಥಾತ್‌ ಅತೀ ಪುರಾತನ ವೈದಿಕ ಪರಂಪರೆಯುಳ್ಳ ಶಕಾöರಾಧನೆಗೆ ಶಂಕರಾಚಾರ್ಯರು ತನ್ನದೇ ವಿಧಾನದ ವಿಶಿಷ್ಟ ಪದ್ಧತಿಗಳನ್ನು ನೀಡಿ ಜನಸಾಮಾನ್ಯರಿಗೂ ನಿಲುಕುವಂತೆ ಮಾಡಿದಂತೆ ಕಂಡು ಬರುತ್ತದೆ. ಇಲ್ಲಿ ಗಮನೀಯವಾದುದು ಶ್ರೀಚಕ್ರ ಪೂಜಾ ವಿಧಾನ ಹಾಗೂ ಅನುಷ್ಠಾನ ಪದ್ಧತಿ.

ಶ್ರೀ ಚಕ್ರ; ಹಾಗೆಂದರೇನು?
ಶ್ರೀ ಚಕ್ರವೆಂದರೆ ತ್ರಿಕೋನಗಳಿಂದ ಪರಸ್ಪರವಾಗಿ ಜೋಡಿಸಲ್ಪಟ್ಟ ರೇಖಾ ಕೃತಿ. ಕೇಂದ್ರದಲ್ಲಿ ಬಿಂದುವಿರುವ ವೃತ್ತದಿಂದ ಕೂಡಿದ್ದಾಗಿದ್ದು ಈ ವೃತ್ತದಲ್ಲಿ ಕೆಳಗಡೆ ತುದಿಯಳ್ಳ ಐದು ತ್ರಿಕೋನಗಳೂ, ಮೇಲ್ಗಡೆ ತುದಿಯಾಗಿರುವ ನಾಲ್ಕು ತ್ರಿಕೋನ ಗಳೂ ಇವೆ. ಈ ಒಂಬತ್ತು ತ್ರಿಕೋನ ಗಳನ್ನು ಒಳಗೊಂಡಿರುವ ವೃತ್ತವು ಪದ್ಮಗಳೆಂದು ಕರೆಯವ ಸಮಾನ ಕೇಂದ್ರವುಳ್ಳ ಎರಡು ವೃತ್ತಗಳಿಂದ ಆವರಿಸಲ್ಪಟ್ಟಿದೆ.

ಮೊದಲನೇ ವೃತ್ತವು ಎಂಟು ದಳಗಳ ಪದ್ಯ ಗಳಿಂದಲೂ, ಎರಡನೇ ವೃತ್ತವು ಹದಿನಾರು ದಳ ಪದ್ಮಗಳಿಂ ದಲೂ ಕೂಡಿದ್ದಾಗಿದೆ. ಈ ಹದಿ ನಾರು ದಳದ ಪದ್ಮವು ಪುನಃ ನಾಲ್ಕು ಆವರಣ ರೇಖೆಗಳಿಂದ ಸುತ್ತಿದಂತಿದ್ದು, ಕೊನೆಗೆ ಈ ಆಕೃತಿಯು ಮೂರು ರೇಖೆಗಳುಳ್ಳ ಚಚ್ಚೌಕದಿಂದ ಆವರಿಸಲ್ಪಟ್ಟಿದೆ. ಒಟ್ಟಾಗಿ ತ್ರಿಕೋನಗಳು, ರೇಖೆಗಳು, ಪದ್ಮಗಳು ಇದರಿಂದ ಶ್ರೀಚಕ್ರದ ನಿರ್ಮಾಣ ವಾಗಿದೆ.

ಮೂರು ರೇಖೆಗಳ ಸಮಚತುಷ್ಕೋನ. ಮೂರು ವೃತ್ತಗಳು, ಹದಿನಾರು ದಳ ಪದ್ಮ, ಹದಿನಾಲ್ಕು ತ್ರಿಕೋನಗಳಿರುವ ಚಕ್ರ, ಹತ್ತು ತ್ರಿಕೋನಗಳಿರುವ ಎರಡು ಚಕ್ರ, ಎಂಟು ತ್ರಿಕೋನಗಳಿರುವ ಚಕ್ರ, ತ್ರಿಕೋನ, ಕೇಂದ್ರ ಬಿಂದು. ಶ್ರೀಚಕ್ರದ ರೇಖಾ ಕೃತಿಗಳನ್ನು ಕ್ರಮವಾಗಿ ಜೋಡಿಸಿದ ಅನಂತರ ಮೇಲ್ಕಾಣಿಸಿದ ರೀತಿಯ ಒಂಬತ್ತು ಭಾಗಗಳು ಗೋಚರವಾಗಿ ಪೂರ್ಣ ತತ್ತವು ಲಭಿಸುತ್ತದೆ.
ಇಂತಹ ಶ್ರೀ ಚಕ್ರಾರಾಧನೆಯು ಶಾಕ್ತೇಯ ಮತದಲ್ಲಿ ಅತೀ ವಿಶಿಷ್ಟವಾದ ಪದ್ಧತಿಯಾಗಿದೆ. ಪಂಚ ದಶಾಕ್ಷರೀ ಮಂತ್ರದ ಜಪದ ಮೂಲಕ ಶ್ರೀ ಚಕ್ರಾರಾಧನೆಯನ್ನು ನಡೆಸಿದರೆ ಕುಂಡಲಿನೀ ಯೋಗ ಸಿದ್ಧಿಯಾಗು ವುದೆಂದು ಉಪಾಸಕರ ಅಭಿಮತ ವಾಗಿದೆ. ತಂತ್ರ, ಮಂತ್ರ, ಶಾಸ್ತ್ರಗಳು ಈ ದೇಶದ ಅತ್ಯುನ್ನತ ಪರಂಪರೆಗಳಾಗಿವೆ.

Advertisement

ಆಧ್ಯಾತ್ಮಿಕ ಜಗತ್ತಿನ ವೇದಾಂತ ಮೂಲ ಸ್ವರೂಪಗಳಾಗಿವೆ. ದೈವೀಕಾನುಭೂತಿ, ಪರತತ್ತÌ ಸ್ವರೂಪ ಸಾರಗ್ರಹಣಕ್ಕೆ ಜಪ ಮತ್ತು ತಪಗಳೇ ಮೂಲ ಸಾಧನೆಗಳು. ಇಂತಹ ಸಾಧನೆಗಳಲ್ಲಿ ಶಕ್ತ್ಯಾರಾಧನೆಗೆ ಅತೀ ಮಹತ್ವವಿದೆ.

ಶಕ್ತ್ಯಾರಾಧನೆಯಲ್ಲಿ ಶ್ರೀ ಚಕ್ರ ಉಪಾಸನೆಯು ಒಂದು ಪವಿತ್ರ ವಿಧಿಯಾಗಿದ್ದು ನವದುರ್ಗಾ ರಾಧನೆಯ ಪುಣ್ಯ ಫಲವನ್ನು ಶ್ರೀ ಚಕ್ರಾರಾಧನೆಯೊಂದರಿಂದಲೇ ಪಡೆದುಕೊಳ್ಳಲು ಸಾಧ್ಯ ಎನ್ನುವುದು ವಿದ್ವಾಂಸರ ಅಭಿಮತ.

ಶಕ್ತಿಗಳ ಸಂಕೇತವೆಂದು ಪರಿಗಣಿ ಸಲ್ಪಟ್ಟಿರುವ ಶ್ರೀಚಕ್ರದಲ್ಲಿ ಸರ್ವ ದೇವಾ ಹನೆಯೂ ಸಾಧ್ಯ. ಮುಖ್ಯವಾಗಿ ತ್ರಿಶಕ್ತಿ ಅಂದರೆ ಶ್ರೀ ಮಹಾಕಾಳಿ, ಶ್ರೀ ಮಹಾ ಲಕ್ಷ್ಮೀ, ಶ್ರೀ ಮಹಾಸರಸ್ವತಿ ಜತೆಗೆ ತ್ರಿಮೂರ್ತಿ ಶ್ರೀ ಬ್ರಹ್ಮ , ಶ್ರೀ ವಿಷ್ಣು, ಶ್ರೀ ಮಹೇಶ್ವರರ ತ್ರಿಗುಣವೂ ಸೇರಲ್ಪಟ್ಟಿರು ವುದರಿಂದ ಶ್ರೀ ಚಕ್ರದ ಆರಾಧನೆಯು ಕುಂಡಲಿನೀ ಯೋಗ ಸಾಧನಾ ತಂತ್ರ ವೆಂದು ಪರಿಗಣಿಸಲ್ಪಟ್ಟಿದ್ದು ಭಾರತೀಯ ಶಕ್ತಿ ಕೇಂದ್ರಗಳ ಮತ್ತು ಶಕಾöರಾಧಕರ ಪರಮ ಪವಿತ್ರವಾದ ಆರಾಧನಾ ಪದ್ಧತಿಗಳಲ್ಲಿ ಒಂದಾಗಿರುವುದು ಇಲ್ಲಿ ಗಮನೀಯ ವಿಚಾರವಾಗಿದೆ. ನವರಾತ್ರಿಯ ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ಆರಾಧನೆ ಉಪಾ ಸನಾದಿಗಳು ಶ್ರೀ ಚಕ್ರಾತ್ಮಕವಾಗಿ ನಡೆದು ಸಾಧನತ್ರಯಗಳಿಗೆ ಹೇತುವಾಗಲಿ ಎಂಬ ಹಾರೈಕೆ.

ಶಕ್ತಿಗಳ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶ್ರೀಚಕ್ರದಲ್ಲಿ ಸರ್ವ ದೇವಾಹನೆಯೂ ಸಾಧ್ಯ. ಮುಖ್ಯವಾಗಿ ತ್ರಿಶಕ್ತಿ ಅಂದರೆ ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಸರಸ್ವತಿ ಜತೆಗೆ ತ್ರಿಮೂರ್ತಿ ಶ್ರೀ ಬ್ರಹ್ಮ , ಶ್ರೀ ವಿಷ್ಣು, ಶ್ರೀ ಮಹೇಶ್ವರರ ತ್ರಿಗುಣವೂ ಸೇರಲ್ಪಟ್ಟಿರುವುದರಿಂದ ಶ್ರೀ ಚಕ್ರದ ಆರಾಧನೆಯು ಕುಂಡಲಿನೀ ಯೋಗ ಸಾಧನಾ ತಂತ್ರವೆಂದು ಪರಿಗಣಿಸಲ್ಪಟ್ಟಿದ್ದು ಭಾರತೀಯ ಶಕ್ತಿ ಕೇಂದ್ರಗಳ ಮತ್ತು ಶಕಾöರಾಧಕರ ಪರಮ ಪವಿತ್ರವಾದ ಆರಾಧನಾ ಪದ್ಧತಿಗಳಲ್ಲಿ ಒಂದಾಗಿರುವುದು ಇಲ್ಲಿ ಗಮನೀಯ ವಿಚಾರವಾಗಿದೆ. ಶ್ರೀಚಕ್ರವು ದೇವಿಯ ಚಿಹ್ನೆ ಮಾತ್ರವಲ್ಲ ಇಡಿಯ ವಿಶ್ವ ಮತ್ತು ಮಾನವ ಶರೀರದ ಸೂಕ್ಷ್ಮರೂಪವಾಗಿದೆ. ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣೀಭೂತವಾದ ಮೂಲಶಕ್ತಿಯನ್ನು ಆರಾಧಿಸುವ ಒಂದು ಸಾಧನವೂ ಹೌದು.

-ಮೋಹನದಾಸ, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next