Advertisement
ನಗರದ ಕುಂಬಾರ ಓಣಿಯ ಕಾಯಕ ನಿಲಯದಲ್ಲಿ ಸಗರದ ಕಲಾ ನಿಕೇತನ ಟ್ರಸ್ಟ್ ವತಿಯಿಂದಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.ಬರೀ ಶರಣರ ಅನುಯಾಯಿ ಎಂದು ಮಾತಿಗೆ ಭಾಷಣದಲ್ಲಿ ಅಂದರೆ ಸಾಲದು. ಬದುಕಿನಲ್ಲಿ ಅದರಂತೆ ನಡೆದುಕೊಳ್ಳಬೇಕು. ಅಂದಾಗ ಮಾತ್ರಶರಣರಿಗೆ ಗೌರವ ಸಲ್ಲಿಸದಂತಾಗಲಿದೆ. ಬದುಕು ಸಹ ಸುಂದರವಾಗಿ ನಡೆಯಲಿದೆ ಎಂದರು.
Related Articles
Advertisement
ಸುರಪುರ: ಶೇರುದಾರ ಸದಸ್ಯರು ಮತ್ತು ಸಾಲಗಾರರು ಸಹಕಾರಿ ಸಂಘಕ್ಕೆ ಶಕ್ತಿ. ಅವರು ತೆಗೆದುಕೊಂಡಿರುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಸಂಘಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ ಎಂದು ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ವಗ್ಗರ್ ಹೇಳಿದರು.
ರಂಗಂಪೇಟೆಯ ಬಸವೇಶ್ವರ ಪಿಯು ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದಜೀವನಜ್ಯೋತಿ ಸಹಕಾರ ಸಂಘದಮೂರನೇ ವಾರ್ಷಿಕ ಮಹಾಸಭೆಯಲ್ಲಿಅವರು ಮಾತನಾಡಿ, ಕೆಲವೇ ಸದಸ್ಯರಸಹಕಾರದೊಂದಿಗೆ ಆರಂಭಿಸಿದ ಸಂಘ ಇಂದು 2,69,835 ಶೇರು ಬಂಡವಾಳಹೊಂದಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 1,74,950 ಆವರ್ತ ಠೇವಣಿಯೊಂದಿಗೆ ಪ್ರಸಕ್ತ ಸಾಲಿನಲ್ಲಿ 64,432 ನಿವ್ವಳ ಲಾಭ ಗಳಿಸಿದೆ. ಜನರ ವಿಶ್ವಾಸ ಗಳಿಸಿ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಸಾಗುವ ಮೂಲಕಬೃಹತ್ತಾಗಿ ಬೆಳೆಯುತ್ತಿರುವುದು ನೆಮ್ಮದಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಉಪನ್ಯಾಸಕ ವಿಜಯಕುಮಾರ ಬಣಗಾರ ಮತ್ತು ಕಾನೂನು ಸಲಹೆಗಾರ ಬಿ.ಕೆ. ದೇಸಾಯಿ ಮಾತನಾಡಿ, ಶ್ರಮಿಕರು ಮತ್ತು ಸಣ್ಣಪುಟ್ಟ ಬೀದಿ ಬದಿಯ ವ್ಯಾಪಾರಸ್ಥರಿಗೆಅನುಕೂಲ ಕಲ್ಪಿಸುವ ಉದ್ದೇಶದಿಂದ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಸಂಘತನ್ನ ಧ್ಯೇಯೋದ್ದೇಶದೊಂದಿಗೆ ಮುನ್ನಡೆಸಾಗುತ್ತಿರುವುದು ಸಂತಸ ತಂದಿದೆ. ಸಹಕಾರಿವಲಯದಲ್ಲಿ ಸಾಕಷ್ಟು ಸೌಲಭ್ಯಗಳಿಗೆ ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವೆಕಟೇಶ ಅಮ್ಮಾಪುರ ಮಾತನಾಡಿದರು. ನಿರ್ದೇಶಕ ಶಶಿಕುಮಾರ ಲಕ್ಕಿಮಾರಸಂಘದ ವಾರ್ಷಿಕ ವರದಿ ವಾಚನ ಮಾಡಿ ಅನುಮೋದನೆ ಪಡೆದರು. ನಿರ್ದೇಶಕರಾದಲಿಂಗಪ್ಪ ಹೂಗಾರ, ಮಲ್ಲಪ್ಪ ಕರೇಗಾರ, ಸುರೇಶ ಯಾದಗಿರಿ, ನಾಗಪ್ಪ ದೊಡ್ಮನಿ, ಶಿವರಾಜ ಜಯಶ್ರೀ ವೇದಿಕೆಯಲ್ಲಿದ್ದರು. ವಿಶ್ವರಾಧ್ಯ ಯಾದಗಿರಿ ಸ್ವಾಗತಿಸಿದರು. ದೇವಿಂದ್ರಪ್ಪ ದೇಶಪಾಂಡೆ ನಿರೂಪಿಸಿದರು. ಮಲ್ಲಪ್ಪ ಕರೇಗಾರ ವಂದಿಸಿದರು.