ಹಾವೇರಿ: ತಾಲೂಕಿನ ನರಸೀಪುರದ ನಿಜ ಶರಣ ಅಂಬಿಗರ ಚೌಡಯ್ಯನವರ ಐಕ್ಯಸ್ಥಳದ ಬಳಿಯ ಗುರುಪೀಠದಲ್ಲಿ ಪ್ರತಿವರ್ಷ ಜ. 14 ಹಾಗೂ 15ರಂದು ಆಯೋಜಿಸುವ ನಿಜಶರಣ ಅಂಬಿಗರ ಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವವನ್ನು ಈ ಸಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.
ಭಕ್ತರು ಅಂದು ತಮ್ಮ ಮನೆಗಳಲ್ಲಿಯೇ ಪೂಜೆ ಸಲ್ಲಿಸಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಲಕ್ಷಾಂತರಭಕ್ತರು ಜಾತ್ರೆಯಲ್ಲಿ ಸೇರುತ್ತಿದ್ದರು. ಈ ಸಾರಿ ಕೋವಿಡ್ ಇರುವುದರಿಂದ ಇಷ್ಟು ಜನ ಒಂದೆಡೆ ಸೇರಿದರೆ ಕೋವಿಡ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.
ಹೀಗಾಗಿ, ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಶರಣ ಸಂಸ್ಕೃತಿ ಉತ್ಸವ,ವಚನ ಸಾಹಿತ್ಯ ಗ್ರಂಥಗಳ ರಥೋತ್ಸವ, ಲಿಂ.ಶಾಂತಮುನಿ ಸ್ವಾಮೀಜಿಗಳಪುಣ್ಯಸ್ಮರಣೋತ್ಸವ ಹಾಗೂ ಈಗಿನ ಗುರುಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಲ್ಲದೇ, ರಥೋತ್ಸವವನ್ನು ಸರಳವಾಗಿ ನಡೆಸಲಾಗುವುದು. ಭಕ್ತರು ಜಾತ್ರೆ ಹಾಗೂ ರಥೋತ್ಸವವಕ್ಕೆ ಗುರುಪೀಠಕ್ಕೆ ಬರುವ ಬದಲು ಈ ಸಾರಿ ನಿಮ್ಮ ಮನೆಗಳಲ್ಲಿಯೇ ನಿಜಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಬೇಕು ಎಂದರು. ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ. 14 ಹಾಗೂ 15ರಂದು ನಡೆಯುವ ಧಾರ್ಮಿಕಕಾರ್ಯಕ್ರಮಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುವುದು. ಅಲ್ಲಿಯೇ ಭಕ್ತರು ವೀಕ್ಷಿಸಬಹುದು ಎಂದರು.
ಎಸ್‌ಟಿ-ಹೋರಾಟಕ್ಕೆ ಸಿದ್ಧತೆ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಗಂಗಾಮತ ಸಮಾಜದವರು ಹಿಂದುಳಿದಿದ್ದಾರೆ.ಹೀಗಾಗಿ ನಮ್ಮ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆಯನ್ನು ಬಹುದಿನಗಳಿಂದ ಸಲ್ಲಿಸುತ್ತಾ ಬಂದಿದ್ದೇವೆ.ಆದರೂ ಈವರೆಗೂ ಅದಕ್ಕೆ ಸ್ಪಂದನೆ ದೊರೆತಿಲ್ಲ.ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿಹೋರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.ನಿಜಶರಣ ಅಂಬಿಗರ ಚೌಡಯ್ಯನವರಐಕ್ಯಸ್ಥಳದ ಅಭಿವೃದ್ಧಿಗೆ ನಿಜಶರಣ ಅಂಬಿಗರ ಚೌಡಯ್ಯನ ಹೆಸರಿನಲ್ಲಿ ಅಭಿವೃದ್ಧಿ ಪ್ರಾ ಧಿಕಾರರಚಿಸಬೇಕೆಂಬ ಬೇಡಿಕೆಯೂ ಇನ್ನೂ ಈಡೇರಿಲ್ಲ ಎಂದು ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಪೀಠದನಿಕಟಪೂರ್ವ ಕಾರ್ಯಾಧ್ಯಕ್ಷ ಬಸವರಾಜಸಪ್ಪನಗೋಳ, ಕಾರ್ಯಾಧ್ಯಕ್ಷ ಅಶೋಕವಾಲಿಕಾರ, ಪ್ರಧಾನ ಕಾರ್ಯದರ್ಶಿ ಮಾರುತಿಕಬ್ಬೇರ, ಸಹಕಾರ್ಯದರ್ಶಿ ಎಸ್.ಎನ್. ಮೆಡ್ಲೇರಿ, ಪ್ರಭು ಸುಣಗಾರ, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥಭೋವಿ, ಶಂಕರ ಸುತಾರ, ಕರಬಸಪ್ಪ ಹಳದೂರ, ಕೃಷ್ಣಮೂರ್ತಿ ವಡ್ನಿಕೊಪ್ಪ ಇತರರು ಇದ್ದರು.