Advertisement

ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರ

02:36 PM Aug 02, 2022 | Team Udayavani |

ಕಲಬುರಗಿ: ಶ್ರಾವಣದ ಮೊದಲ ಸೋಮವಾರ ನಗರದ ಪುರದೇವತೆ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಎಲ್ಲಡೆಯಿಂದ ಹರಿದು ಬಂತು. ದಿನವೀಡಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

Advertisement

ಜನರು ಕಾಯಿ, ಹಣ್ಣು ಕರ್ಪೂರದ ಸಮೇತ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರವಾದರು. ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಭಜನೆ ಮಾಡುತ್ತಾ ಪಾದಯಾತ್ರೆ ಮುಖೇನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಭಜನೆ ಮಾಡಿ ಜನರನ್ನು ಭಕ್ತ ಸಾಗರದಲ್ಲಿ ಮುಳುಗಿಸಿದರು. ನಸುಕಿನಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಕೆಲವು ಭಕ್ತರು ನೈವೇದ್ಯ ಸಮರ್ಪಸಿದರು. ಕಲಬುರಗಿ, ಯಾದಗಿರಿ, ಬೀದರ್‌ ಸೊಲ್ಲಾಪುರ, ಅಕ್ಕಲಕೋಟೆ, ಪುಣೆ, ಹೈದ್ರಾಬಾದ್‌, ತೆಲಂಗಾಣದ ಹಲವು ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆದರು. ಇದರಿಂದ ಸೋಮವಾರ ದಿನವೀಡಿ ದೇವಸ್ಥಾನದಲ್ಲಿ ಜನಜಂಗುಳಿ ಕಂಡು ಬಂತು.

ವ್ಯಾಪಾರ ವಹಿವಾಟು ಜೋರು: ಸೋಮವಾರ ದಿನವಿಡೀ ನೂರಾರು ಭಕ್ತರು ದೇವಸ್ಥಾನಕ್ಕೆ ಬಂದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿರುವ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡಿದರು. ಅಲ್ಲದೆ, ಸುತ್ತಲಿನಲ್ಲಿರುವ ಅಂಗಡಿಗಳಲ್ಲಿ ಕಾಯಿ, ಹೂವು, ಹಣ್ಣು ಮತ್ತು ಕರ್ಪೂರದ ವ್ಯಾಪಾರ ಬಲು ಜೋರಾಗಿ ನಡೆಯಿತು. ಈ ವೇಳೆಯಲ್ಲಿ ಪೊಲೀಸರು ಬಂದೋಬಸ್ತ್ ಚೆನ್ನಾಗಿ ಮಾಡಲಾಗಿತ್ತು. ಹಲವಾರು ಕಡೆಗಳಲ್ಲಿ ಮಹಿಳಾ ಪೊಲೀಸರ ನಿಯೋಜಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next