Advertisement

11 ರಿಂದ ಶರಣ ವಿಜಯೋತ್ಸವ-ನಾಡಹಬ್ಬ: ಡಾ|ಗಂಗಾಂಬಿಕಾ

12:21 PM Oct 10, 2018 | |

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಯಾದ ಈ ನಾಡಿನಲ್ಲಿ ಶರಣ ವಿಜಯೋತ್ಸವ- ನಾಡಹಬ್ಬ, 39ನೇ ಹುತಾತ್ಮ ದಿನಾಚರಣೆ ಹಾಗೂ ಮಹಾವಿಜ್ಞಾನ-ವಿಜ್ಞಾನ ಅಭಿಯಾನ ಕಾರ್ಯಕ್ರಮವನ್ನು ಅ.11ರಿಂದ
19ರ ವರೆಗೆ ನಗರದ ರಥ ಮೈದಾನದ ಬಿ.ಕೆ.ಡಿ.ಬಿ. ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಳಯ್ಯನವರ ಪೀಠದ ಡಾ| ಗಂಗಾಂಬಿಕಾ ಅಕ್ಕ ತಿಳಿಸಿದರು.

Advertisement

ನಗರದ ಹರಳಯ್ಯನವರ ಗವಿಯಲ್ಲಿ ಮಂಗಳವಾರ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್‌ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ.11ರಂದು ಸಂಜೆ 5 ಗಂಟೆಗೆ ಶರಣ ವಿಜಯೋತ್ಸವ ಸಮಾರಂಭ ನಡೆಯಲಿದ್ದು, ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ,
ಡಾ| ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಲಿದ್ದು, ಶ್ರೀ ನಿಜಗುಣ ಪ್ರಭು ಉದ್ಘಾಟನೆ ನೆರವೇರಿಸುವರು.

ಮುಖ್ಯ ಅತಿಥಿಯಾಗಿ ಸಚಿವ ರಾಜಶೇಖರ ಪಾಟೀಲ್‌ ಆಗಮಿಸುವರು. ಶಾಸಕ ಬಿ.ನಾರಾಯಣರಾವ್‌ ಅಧ್ಯಕ್ಷತೆ ವಹಿಸಲಿದ್ದು, ಅಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು, ಸಾಹಿತಿಗಳು ಪಾಲ್ಗೊಳ್ಳುವರು ಎಂದರು.

ಅ.12ರಂದು ಸಂಜೆ 5 ಗಂಟೆಗೆ ಕೃಷಿ-ಕೃತ್ಯ ಕಾಯಕ, ಅ.13ರಂದು ಸಂಜೆ 5 ಗಂಟೆಗೆ ತಾಳಮಾನ ಸರಿಸವನರಿಯೆ, 14ಕ್ಕೆ ಸಂಜೆ 5ರಂದು ಕಪಿಲ ಸಿದ್ಧ ಮಲ್ಲಿಕಾರ್ಜುನ, 15ರಂದು ಸಂಜೆ 5 ಗಂಟೆಗೆ ಶರಣರು ಮತ್ತು ಸಮಾನತೆ, 16ರಂದು ಸಂಜೆ 5 ಗಂಟೆಗೆ ಆಸೆಯೆಂಬುದು ಭವನ ಜೀಜ, 17ರಂದು ಬೆಳಗ್ಗೆ 10:30ಕ್ಕೆ ಬಸವ ಮರಾಠಿ ಗೋಷ್ಠಿ, ಸಂಜೆ 5ಕ್ಕೆ ಅನುಭಾವ ಗೋಷ್ಠಿ ಮತ್ತು 18ರಂದು ಬೆಳಗ್ಗೆ 8ಗಂಟೆಗೆ 770 ಅಮರ ಗಣಂಗಳಿಂದ ಸಾಮೂಹಿಕ ಇಷ್ಟಲಿಂಗ ಯೋಗ, ಮಧ್ಯಾಹ್ನ 2:30ರಿಂದ ಬಸವೇಶ್ವರ ವೃತ್ತದಿಂದ ಹರಳಯ್ಯ ಅನುಭವ ಮಂಟಪದ ವರೆಗೆ ಅಮೃತ ಪಾತ್ರೆಯ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ರಾಷ್ಟ್ರೀಯ ಪುರಸ್ಕಾರ ಪ್ರಧಾನ ಸಮಾರಂಭ ಮತ್ತು ಕಲ್ಯಾಣ ಕ್ರಾಂತಿ ನಡೆಯಲಿದೆ ಎಂದು ಹೇಳಿದರು.

ಅ.19ರಂದು ಸಂಜೆ 3:30 ಕ್ಕೆ ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ- ವಚನ ಪಠಣ ನಡೆಯಲಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

Advertisement

ನಂತರ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಶರಣರು ಸಮಾಜಕ್ಕಾಗಿ ಮಾಡಿರುವ ತ್ಯಾಗನವನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ತಿಳಿಸುವ ಉದ್ದೇಶದಿಂದ ನಾಡಹಬ್ಬ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅ.18ರಂದು ನಡೆಯುವ ಕಾರ್ಯಕ್ರಮ ಮಹತ್ವದಾಗಿದೆ. ಲೋಕನಾಯಕ, ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಸರಿಗೆಪಾತ್ರರಾದ ಡಾ|ಭೀಮಣ್ಣಾ ಖಂಡ್ರೆ ಅವರಿಗೆ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಕೇಂದ್ರದ ಮಾಜಿ ಸಚಿವ ಶಿವರಾಜ ಪಾಟೀಲ್‌ ಚಾಕೂರಕರ್‌ ಆಗಮಿಸಲಿದ್ದಾರೆ ಎಂದರು. ತೆಲಂಗಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಜನತೆ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ನೀರಿಕ್ಷೆ ಇದೆ. 

ಆದ್ದರಿಂದ ಜಿಲ್ಲೆಯ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಗಿರೀಶ ತಾಂಬೋಳೆ, ಶರಣು ಆಲಗುಡ ಸೇರಿದಂತೆ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next