Advertisement

National Level ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್‌ ಶರಣ್‌ ರಾವ್‌ ಚಾಂಪಿಯನ್‌

12:01 AM Jul 02, 2024 | Team Udayavani |

ಕಾಪು: ಶ್ರೀ ನಾರಾಯಣಗುರು ಸ್ಕೂಲ್‌ ಆಫ್‌ ಚೆಸ್‌ ಸಂಸ್ಥೆ ಉಡುಪಿ ಮತ್ತು ಕಾಪು ಘಟಕದ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್‌ ಟೂರ್ನಿಯಲ್ಲಿ ಮಂಗಳೂರಿನ ಶರಣ್‌ ರಾವ್‌ ಚಾಂಪಿಯನ್‌ ಆಗಿದ್ದು, 25 ಸಾವಿರ ನಗದು ಬಹುಮಾನ ಮತ್ತು ನಾರಾಯಣ ಗುರು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು 9 ಸುತ್ತಿನ ಸ್ಪರ್ಧೆಗಳಲ್ಲಿ 8.5 ಅಂಕ ಕಲೆಹಾಕಿದರು.

Advertisement

ಶನಿವಾರದ 6 ಸುತ್ತುಗಳಲ್ಲಿ 5.5 ಅಂಕ ಗಳಿಸಿದ್ದ 2ನೇ ಶ್ರೇಯಾಂಕಿತ ಶರಣ್‌, ರವಿವಾರ ಎಲ್ಲ ಸುತ್ತುಗಳಲ್ಲೂ ಜಯಶಾಲಿಯಾದರು. ಕೇರಳದ ನಿತಿನ್‌ ಬಾಬು ಮತ್ತು ತಮಿಳುನಾಡಿನ ಆಕಾಶ್‌ ಜಿ. ವಿರುದ್ಧ 8 ಮತ್ತು 9ನೇ ಸುತ್ತುಗಳಲ್ಲಿ ಗೆದ್ದು ಬಂದರು. ಐದರಿಂದ 8ನೇ ಸುತ್ತಿನ ವರೆಗೆ ಆಕಾಶ್‌ ಅಗ್ರಸ್ಥಾನದಲ್ಲಿದ್ದರು.

ಆಕಾಶ್‌ ಜಿ., ಮಂಗಳೂರಿನ ಲಕ್ಷಿತ್‌ ಸಾಲ್ಯಾನ್‌ ಮತ್ತು ತಮಿಳುನಾಡಿನ ಎಸ್‌.ಎ. ಕಣ್ಣನ್‌ ತಲಾ 8 ಅಂಕ ಗಳಿಸಿದರು. ಉತ್ತಮ ಟೈಬ್ರೇಕರ್‌ ಆಧಾರದಲ್ಲಿ ಆಕಾಶ್‌ ದ್ವಿತೀಯ, ಲಕ್ಷಿತ್‌ ತೃತೀಯ ಮತ್ತು ಕಣ್ಣನ್‌ 4ನೇ ಸ್ಥಾನ ಗಳಿಸಿದರು. 7.5 ಅಂಕಗಳೊಂದಿಗೆ ನಿತಿನ್‌ ಬಾಬು 5ನೇ ಸ್ಥಾನಿಯಾದರು. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ರಾಮಕೃಷ್ಣ ಜೆ., ಕರ್ನಾಟಕದ ಆರುಷ್‌ ಭಟ್‌ ಮತ್ತು ಶಾನ್‌ ಡಿಯೋನ್‌ ಸಿಕ್ವೇರ ಕೂಡ 7.5 ಅಂಕ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next