Advertisement

Kaup; ರಾಷ್ಟ್ರ ಮಟ್ಟದ ಮುಕ್ತ ರ‍್ಯಾಪಿಡ್ ಚೆಸ್‌ಗೆ ಚಾಲನೆ

01:01 AM Jun 30, 2024 | Team Udayavani |

ಕಾಪು: ಶ್ರೀ ನಾರಾಯಣ ಗುರು ಸ್ಕೂಲ್‌ ಆಫ್‌ ಚೆಸ್‌ ಉಡುಪಿ ಮತ್ತು ಕಾಪು ಇವರ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಟ್ರೋಫಿಗಾಗಿ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಫಿಡೆ ರೇಟೆಡ್‌ ರ‍್ಯಾಪಿಡ್ ಚೆಸ್‌ ಪಂದ್ಯಾಟವನ್ನು ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶ್ರೀಧರ್‌ ಶೆಣೈ ಅವರು ಉದ್ಘಾಟಿಸಿದರು.

Advertisement

ಉದ್ಯಮಿ ಅಶೋಕ್‌ ಕುಮಾರ್‌ ಶೆಟ್ಟಿ ಮಾತನಾಡಿ, ಚದುರಂಗ ಭಾರತೀಯ ಕ್ರೀಡೆಯಾಗಿದ್ದು ಆಟಗಾರರ ಮೆದು ಳನ್ನು ಜಾಗೃತಿಗೊಳಿಸುವ ಮತ್ತು ಬುದ್ದಿ ಮತ್ತೆಯನ್ನು ಹೆಚ್ಚಿಸುವ ಕ್ರೀಡೆಯಾಗಿದೆ. ಚದುರಂಗದಲ್ಲಿ ಹಲವು ಮಂದಿ ಭಾರತೀಯರು ವಿಶ್ವವನ್ನು ಆಳುವ ಸಾಧನೆ ಮಾಡಿದ್ದು, ಕಾಪುವಿನಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಪಂದ್ಯಾಟವನ್ನು ಆಯೋಜಿಸುವ ಮೂಲಕ ರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆ ದಿರುವುದು ಶ್ಲಾಘನೀಯವಾಗಿದೆ ಎಂದರು.

ಉದ್ಯಮಿ ಅವಿನಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಶುಭಾಶಂಸನೆಗೈದರು. ಅಶೋಕ್‌ ಕುಮಾರ್‌ ಶೆಟ್ಟಿ ಮತ್ತು ರಮೇಶ್‌ ಆರ್‌. ಪೂಜಾರಿ ಚೆಸ್‌ ಕಾಯಿಯನ್ನು ಮುನ್ನಡೆಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಶ್ರೀ ನಾರಾಯಣ ಗುರು ಸ್ಪೋರ್ಟ್ ಮತ್ತು ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಉಮಾನಾಥ್‌ ಕಾಪು, ಪೆನ್ವೇಲ್‌ ಸೋನ್ಸ್‌, ನಾರಾಯಣ ಸೇರಿಗಾರ್‌, ಲಕ್ಷ್ಮೀ ನಾರಾಯಣ ಆಚಾರ್ಯ, ನಾಗೇಶ್‌ ಕಾರಂತ್‌, ಮುಖ್ಯ ತೀರ್ಪುಗಾರ ವಸಂತ್‌ ಬಿ.ಎಚ್‌. ಬೆಂಗಳೂರು ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕ ಫಿಡೆ ಆರ್ಬಿಟರ್‌ ಮತ್ತು ಕೋಚ್‌ ಸಾಕ್ಷಾತ್‌ ಯು.ಕೆ. ಸ್ವಾಗತಿಸಿದರು. ನಿರ್ದೇಶಕಿ ಸೌಂದರ್ಯ ಯು. ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

442 ಸ್ಪರ್ಧಿಗಳು
ಈ ಚೆಸ್‌ ಸ್ಪರ್ಧೆಯಲ್ಲಿ ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದಿಲ್ಲಿ, ಪಶ್ಚಿಮ ಬಂಗಾಲ ಸಹಿತ ವಿವಿಧ ರಾಜ್ಯಗಳ 442 ಸ್ಪರ್ಧಿಗಳು ಭಾಗವವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next