Advertisement

World Chess; ಸಿಂಗಾಪುರಕ್ಕೆ ಸಿಕ್ಕಿತು ವಿಶ್ವ ಚೆಸ್‌ ಆತಿಥ್ಯ

11:15 PM Jul 01, 2024 | Team Udayavani |

ಹೊಸದಿಲ್ಲಿ: ಬಹುನಿರೀಕ್ಷಿತ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಕೂಟದ ಬಿಡ್‌ ಸಿಂಗಾಪುರ ಪಾಲಾಗಿದೆ. ಹೀಗಾಗಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ. ಗುಕೇಶ್‌ ಅವರಿಗೆ ತವರಿನಲ್ಲಿ ಆಡುವ ಅವಕಾಶ ತಪ್ಪಿದೆ. ಪಂದ್ಯಾವಳಿಯನ್ನು ಆಯೋಜಿಸಲು ಭಾರತ ಕೂಡ ಬಿಡ್‌ ಸಲ್ಲಿಸಿತ್ತು, ಜತೆಗೆ ಇದನ್ನು ಗೆಲ್ಲುವ ನಿರೀಕ್ಷೆಯನ್ನೂ ಹೊಂದಿತ್ತು.

Advertisement

ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಆತಿಥ್ಯದ ಬಿಡ್‌ ಸಿಂಗಾಪುರ ಸರಕಾರದಿಂದ ಬೆಂಬಲ ಪಡೆದಿರುವ ಸಿಂಗಾಪುರ ಚೆಸ್‌ ಫೆಡರೇಶನ್‌ ಗೆದ್ದಿದೆ ಎಂದು ಫಿಡೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಪಂದ್ಯಾವಳಿಗೆ ಆತಿಥ್ಯ ವಹಿಸಲು ಭಾರತದಿಂದ ಹೊಸದಿಲ್ಲಿ, ಚೆನ್ನೈ ಬಿಡ್‌ ಸಲ್ಲಿಸಿದ್ದವು. ಇದರ ಜತೆಗೆ ಸಿಂಗಾಪುರ ಕೂಡ ಬಿಡ್‌ ಸಲ್ಲಿಸಿದ್ದು, ಈಗ ಅದೃಷ್ಟ ಒಲಿದಿದೆ.

ನೂತನ ವಿಶ್ವ ವಿಜೇತನನ್ನು ನಿರ್ಧರಿಸಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್‌, ಚೀನದ ಡಿಂಗ್‌ ಲಿರೆನ್‌ ಮತ್ತು ಕ್ಯಾಂಡಿಡೇಟ್‌ ಚೆಸ್‌ ಚಾಂಪಿಯನ್‌ ಡಿ. ಗುಕೇಶ್‌ ಸ್ಪರ್ಧಿಸಲಿದ್ದಾರೆ. ನ. 20ರಿಂದ ಡಿ. 15ರ ವರೆಗೆ ಪಂದ್ಯಾವಳಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next