ದಾವಣಗೆರೆ: ಜಾತ್ಯತೀತ ತತ್ವಗಳನ್ನು ಬೋ ಸಿದ ವಚನಕಾರರು, ದಾಸರು ಮುಂತಾದ ಶರಣ-ಶರಣೆಯರನ್ನು ಜಾತೀಯ ಲೇಪನ ಹಚ್ಚಿ ಕಟ್ಟಿ ಹಾಕುವ ದುರಂತ ನಮ್ಮ ನಾಡಿನಲ್ಲಿ ನಡೆಯುತ್ತಿದೆ ಕನ್ನಡ ಪರ ಹೋರಾಟಗಾರಬಂಕಾಪುರದ ಚನ್ನಬಸಪ್ಪ ಬೇಸರಿಸಿದ್ದಾರೆ.
ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಹಾಲಕೆರೆ ಅನ್ನದಾನೀಶ್ವರ ಶಾಖಾಮಠದಲ್ಲಿ ಏರ್ಪಡಿಸಿದ್ದ 200ನೇ ಶಿವಾನುಭವ ಸಂಪದ, ಬಸವೇಶ್ವರ ಜಯಂತಿ ಉಪನ್ಯಾಸ ನೀಡಿದ ಅವರು, ನಾಡು, ನುಡಿಗಾಗಿ ಅನೇಕರು ಶ್ರಮಿಸಿದ್ದಾರೆ ಎಂದರು. ಕನಕದಾಸರು, ಬಸವಣ್ಣನವರು, ಬೇಡರ ದಾಸೀಮಯ್ಯ,
ಅಕ್ಕಮಹಾದೇವಿ ಇತ್ತೀಚೆಗೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿದ್ಧಾರೂಢರು, ಶಿಶುನಾಳ ಷರೀಫರು ಇನ್ನು ಹಲವಾರು ಮಹನೀಯರಿಗೆ ಜಾತಿಯ ಲೇಪನ ಹಚ್ಚುವುದನ್ನು ಅಷ್ಟೇ ಅಲ್ಲ ಭಾರತದ ಸ್ವಾತಂತ್ರಕ್ಕಾಗಿ ಶಾಂತಿಯುತ ಚಳವಳಿ ಮಾಡಿದ ಗಾಂಯವರನ್ನು ಜಾತಿಗೆ ಸೀಮಿತ ಗೊಳಿಸುವುದನ್ನ ಖಂಡಿಸಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕೊಟ್ಟೂರು ಹಿರೇಮಠದ ಶ್ರೀ ಯೋಗಿರಾಜೇಂದ್ರ ಸ್ವಾಮಿ ಮಾತನಾಡಿ, ಸಮಾನತೆಯನ್ನು ಸಾರಿದ 12ನೇ ಶತಮಾನದ ಶರಣರ ಸ್ಫೂರ್ತಿಯೇ ಇಂದು ನಾವೆಲ್ಲರೂ ತಲೆಎತ್ತಿ ನಡೆಯುತ್ತಿದ್ದೇವೆ. ತಿಪ್ಪೆಯಲ್ಲಿ ಹುಟ್ಟಿದ ಬಿಲ್ವೆಪತ್ರೆ ಮರಕ್ಕೆ ದೀಕ್ಷೆ ಕೊಡುವ ನೀವು, ಮನುಷ್ಯನಾಗಿ ಹುಟ್ಟಿದ ನನಗೆ ಏಕೆ ಲಿಂಗ ದೀಕ್ಷೆ ಕೊಡುವುದಿಲ್ಲವೆಂದು ಪ್ರಶ್ನಿಸುವ ಕಡಕೊಳ ಮಡಿವಾಳಪ್ಪನವರ ಆದರ್ಶಗಳನ್ನು ನಾವೆಲ್ಲರೂ ಮೆಚ್ಚಿಕೊಳ್ಳಲೇಬೇಕು ಎಂದರು.
ಮೂತ್ರಕೋಶ ತಜ್ಞರಾದ ಡಾ| ಹಾಸಬಾವಿ ಶಿವಕುಮಾರ್ ಮಾತನಾಡಿದರು. ಖ್ಯಾತ ಪ್ರವಚನಗಾರ್ತಿ ಟಿ.ಎಂ. ಗೌರಮ್ಮತಾಯಿ, ಟ್ರಸ್ಟಿನ ಕಾರ್ಯದರ್ಶಿ ಎನ್. ಅಡಿವೆಪ್ಪ ಹಾಸಬಾವಿ, ಡಾ. ಭಾರತಿ ಹಾಸಬಾವಿ ಶಿವಕುಮಾರ್, ಟಿ.ಎಚ್.ಎಂ. ಶಿವಕುಮಾರಸ್ವಾಮಿ, ಪತ್ರಕರ್ತ ವೀರಪ್ಪ ಎಂ. ಬಾವಿ, ಸ್ಫೂರ್ತಿ ಸೇವಾ ಸಮಿತಿಯ ಎಂ. ಬಸವರಾಜ್ ವೇದಿಕೆಯಲ್ಲಿದ್ದರು.