ಮುಂಬೈ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಉಪಾಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. 1999 ರಲ್ಲಿ ಪಿ ಎ ಸಂಗ್ಮಾ ಅವರು ಸ್ಥಾಪಿಸಿದ ಪಕ್ಷದ 25 ನೇ ವಾರ್ಷಿಕೋತ್ಸವದಲ್ಲಿ ಶರದ್ ಪವಾರ್ ಈ ಘೋಷಣೆ ಮಾಡಿದರು.
ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಮಹಾರಾಷ್ಟ್ರ, ಹರಿಯಾಣ, ಪಂಜಾಬ್, ಮಹಿಳಾ ಯುವಜನತೆ ಮತ್ತು ಲೋಕಸಭೆ ಸಮನ್ವಯದ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರಫುಲ್ ಪಟೇಲ್ ಅವರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗೋವಾವನ್ನು ನೋಡಿಕೊಳ್ಳಲಿದ್ದಾರೆ. ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ
ಎನ್ ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ತಟ್ಕರೆ ಅವರಿಗೆ ಒಡಿಶಾ, ಪಶ್ಚಿಮ ಬಂಗಾಳ, ರೈತರು ಮತ್ತು ಅಲ್ಪಸಂಖ್ಯಾತರ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ನಂದ ಶಾಸ್ತ್ರಿ ಅವರು ದೆಹಲಿ ಎನ್ ಸಿಪಿ ಮುಖ್ಯಸ್ಥರು ಎಂದು ಶರದ್ ಪವಾರ್ ಘೋಷಿಸಿದರು.
ಘೋಷಣೆಯ ನಂತರ ಸುಪ್ರಿಯಾ ಸುಳೆ ಅವರು ಮಾತನಾಡಿದ್ದು, ಪಕ್ಷಕ್ಕೆ ತುಂಬಾ ಕೃತಜ್ಞರಾಗಿರಬೇಕು ಎಂದು ಹೇಳಿದರು, ಪಕ್ಷವು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸಮರ್ಥಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.