ಮುಂಬಯಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.
ಆ. 31 ಮತ್ತು ಸೆ. 1 ರಂದು ಮುಂಬಯಿಯಲ್ಲಿ ಕೊನೆಯ ಬಾರಿಗೆ ಭೇಟಿಯಾದ ವಿರೋಧ ಪಕ್ಷದ ಮೈತ್ರಿ ಇಂಡಿಯಾನ ಮುಂದಿನ ಯೋಜನೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬಯಿ ನಂತರ ವಿರೋಧ ಬಣ ಸಭೆ ನಡೆಸಿಲ್ಲ ಮತ್ತು ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಮುಂಬರುವ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮುಂದಾಗಿರುವ ಮೈತ್ರಿಕೂಟದ ಮುಂದಿನ ಹಾದಿಯ ಬಗ್ಗೆ ಮೂವರು ನಾಯಕರು ಚರ್ಚಿಸಿದರು.
ಸಭೆ ಸುಮಾರು 40 ನಿಮಿಷಗಳ ಕಾಲ ನಡೆಯಿತು. ಅವರು ಇಂಡಿಯಾ ಬ್ಲಾಕ್‌ನ ಮುಂದಿನ ಸಭೆಯ ಯೋಜನೆ ಗಳನ್ನು ಸಹ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖರ್ಗೆ ಅವರು ಪವಾರ್ ಅವರೊಂದಿಗಿನ ಭೇಟಿಯ ಚಿತ್ರಗಳನ್ನು ಪೋಸ್ಟ್ ಮಾಡಿ, ಇಂದು ರಾಹುಲ್ ಗಾಂಧಿ ಜೊತೆಗೆ, ದೇಶದ ಜನರ ಧ್ವನಿಯನ್ನು ಮತ್ತಷ್ಟು ಹೆಚ್ಚಿಸಲು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಭೇಟಿಯಾದರು ಎಂದು ಹೇಳಿಕೊಂಡಿದ್ದಾರೆ.
ಪವಾರ್ ಅವರು ತಮ್ಮ ಸಭೆಯ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ, ಕಾಂಗ್ರೆಸ್ ಅಧ್ಯಕ್ಷ ಎಂಪಿ ಮಲಿಕಾರ್ಜುನ್ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಸಂಸದ ರಾಹುಲ್ ಗಾಂಧಿ, ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್ ಮತ್ತು ಐಎನ್ಸಿ ಸಿಡಬ್ಲ್ಯೂಸಿ ಸದಸ್ಯ ಗುರುದೀಪ್ ಸಪ್ಪಲ್ ಕೂಡ ಸಭೆಗೆ ಹಾಜರಿದ್ದರು ಎಂದು ಹೇಳಿಕೊಂಡಿದ್ದಾರೆ.